ಪಂಜಾಬ್ ಸಂಪುಟಕ್ಕೆ ಐವರು ಹೊಸ ಮುಖಗಳು
ಚಂಡಿಘಡ,ಸೆ.೨೩- ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದ್ದು, ನಾಲ್ವರು ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಇಂದು ಐವರು ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಇಂದು ಸಂಜೆ ೫ ಗಂಟೆಗೆ ನೂತನ ಸಚಿವರ ಪ್ರಮಾಣವನ ಸ್ವೀಕಾರ ಸಮಾರಂಭ ನಡೆಯಲಿದ್ದು ಹರ್ದೀಪ್ ಸಿಂಗ್ ಮುಂಡಿಯನ್, ತರುಣ್‌ಪ್ರೀತ್ ಸಿಂಗ್ ಸೋಂಧ್, ಬರೀಂದರ್ ಗೋಯಲ್, ಮೊಹಿಂದರ್ ಭಗತ್ ಮತ್ತು ಇನ್ನೂ ಒಬ್ಬ ವ್ಯಕ್ತಿಯ ಹೆಸರು ಇನ್ನೂ ದೃಢಪಟ್ಟಿಲ್ಲ ಎಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ.ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಸಚಿವರಾದ ಬಲ್ಕೌರ್ ಸಿಂಗ್, ಚೇತನ್ ಸಿಂಗ್ ಜೌರಾಮಜ್ರಾ, ಬ್ರಹ್ಮ್ ಶಂಕರ್ ಜಿಂಪಾ ಮತ್ತು ಅನ್ಮೋಲ್ ಗಗನ್ ಮಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಖಾಲಿ ಇರುವ ಸ್ಥಾನ ಸೇರಿದಂತೆ ಐವರು ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಭಗವಂತ್ ಮಾನ್ ಮುಂದಾಗಿದ್ಧಾರೆ.
ಪಂಜಾಬ್ ಸರ್ಕಾರದ ಪ್ರಸ್ತುತ ಸಂಪುಟ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಒಟ್ಟು ೧೫ ಸಚಿವರನ್ನು ಹೊಂದಿದೆ. ಅವರಲ್ಲಿ ಇಬ್ಬರು ಮಾತ್ರ ಮಹಿಳೆಯರು ಇದ್ದಾರೆ. ಸಚಿವ ಸಂಪುಟ ಪುನಾರಚನೆ ಬಳಿಕ ಒಟ್ಟು ಸಚಿವರ ಸಂಖ್ಯೆ ೧೬ಕ್ಕೆ ಏರಿಕೆಯಾಗಲಿದೆ.ಸಚಿವರ ಇಲಾಖೆಯನ್ನು ಬದಲಾವಣೆ ಮಾಡಬೇಕೋ ಅಥವಾ ಕಡಿಮೆ ಮಾಡಬೇಕೋ ಅಥವಾ ಹಾಗೆಯೇ ಇರಿಸಿಕೊಳ್ಳುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಜೊತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ೨೦೨೨ ರಲ್ಲಿ, ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, ಎಎಪಿ ಪ್ರಚಂಡ ವಿಜಯ ಗಳಿಸಿ ಅಧಿಕಾರ ಹಿಡಿದಿದೆ.