ರಿಲೀಸ್‌ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಭಾರೀ ಬೇಡಿಕೆ
ಹೈದ್ರಾಬಾದ್,ಸೆ೨೪:ತೆಲುಗು ನಟ ಜ್ಯೂ.ಎನ್‌ಟಿಆರ್ ‘ಆರ್‌ಆರ್‌ಆರ್ ಸಿನಿಮಾದ ಸಕ್ಸಸ್ ನಂತರ ಬರುತ್ತಿರುವ ‘ದೇವರ’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ‘ದೇವರ’ ( ರಿಲೀಸ್‌ಗೂ ಮುನ್ನವೇ ಮುಂಗಡ ಬುಕ್ಕಿಂಗ್ ಸೋಲ್ಡ್ ಆಗಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ ದೇಶಾದ್ಯಂತ ‘ದೇವರ’ ಚಿತ್ರ ಸೆ.೨೭ರಂದು ರಿಲೀಸ್ ಆಗಲಿದೆ. ಮಿಡ್ ನೈಟ್ ಶೋ ನೋಡೋದ್ದಕ್ಕೂ ಫ್ಯಾನ್ಸ್‌ಗೆ ಅವಕಾಶವಿದೆ. ಹೈದರಾಬಾದ್, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವೆಡೆ ೧,೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ದೇವರ’ ಚಿತ್ರ ತೆರೆಕಾಣುತ್ತಿದೆ. ರಿಲೀಸ್‌ಗೆ ೪ ದಿನ ಬಾಕಿಯಿರುವಾಗಲೇ ಲಕ್ಷ ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಟಿಕೆಟ್ ದರ ಹೆಚ್ಚಾಗಿದ್ರೂ ಚಿತ್ರಕ್ಕೆ ಭಾರೀ ಬೇಡಿಕೆಯಿದೆ.
ಅಂದಹಾಗೆ, ‘ದೇವರ’ ಟ್ರೈಲರ್ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ.ದ್ವಿಪಾತ್ರಗಳಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರೋದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ.
ಹೇಡಿ ಮಗ ಇನ್ನೊಂದು ಕಡೆ ಹಿಂಸಾತ್ಮಕ ತಂದೆಯಾಗಿ ಬದಲಾಗಿದ್ದರ ಬಗ್ಗೆ ಟ್ರೈಲರ್‌ನಿಂದ ಚಿತ್ರದ ಕಥೆಯ ಸುಳಿವು ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ನಟನೆ ನೋಡುಗರಿಗೆ ಕಿಕ್ ಕೊಟ್ಟಿದೆ. ತಾರಕ್ ಮತ್ತು ಜಾನ್ವಿ ಕಾಂಬಿನೇಷನ್ ಝಲಕ್ ಸೊಗಸಾಗಿದೆ. ಒಟ್ನಲ್ಲಿ ರಿಲೀಸ್ ಆಗಿರುವ ‘ದೇವರ’ ಚಿತ್ರದ ಟ್ರೈಲರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ. ಡಬಲ್ ರೋಲ್‌ನಲ್ಲಿ ನಟಿಸಿರುವ ಜ್ಯೂ.ಎನ್‌ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ತಾರಕ್ ಮತ್ತು ಜಾನ್ವಿ ಕಪೂರ್ ಜೊತೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಅನೇಕರು ನಟಿಸಿದ್ದಾರೆ. ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ.