ಎಐ ಬಳಕೆ ವಿಸ್ತರಣೆ ಪಿಚೈ ಶ್ಲಾಘನೆ
ನವದೆಹಲಿ, ಸೆ. ೨೩– ಭಾರತದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ಪಷ್ಟ ದೃಷ್ಟಿಯನ್ನು ಗೂಗಲ್ ಸಿಇಓ ಸುಂದರ್ ಪಿಚೈ ಶ್ಲಾಘಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ೩ ದಿನಗಳ ಅಮೆರಿಕಾ ಭೇಟಿಯ ೨ನೇ ದಿನ ನ್ಯೂಯಾರ್ಕ್‌ನಲ್ಲಿ ಉನ್ನತ ಟೆಕ್ ಕಂಪನಿಗಳ ಸಿಇಓ ಗಳೊಂದಿಗೆ ದುಂಡು ಮೇಜಿನ ಸಭೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತದಲ್ಲಿ ಕೃತಕ ಬುದ್ಧಿಮತ್ತೆತೆ ಬಳಕೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ಮೋದಿ ಕ್ರಮವನ್ನು ಪಿಚೈ ಶ್ಲಾಘಿಸಿದ್ದಾರೆ.
ದೇಶದ ಜನರ ಅನುಕೂಲಕ್ಕಾಗಿ ಆರೋಗ್ಯ, ಶಿಕ್ಷಣ, ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಿಂದ ಭಾರತವನ್ನು ಪರಿವರ್ತಿಸುವಂತ ಪ್ರಧಾನಿ ನರೇಂದ್ರಮೋದಿಯವರು ಗಮನಹರಿಸುತ್ತಿದ್ದಾರೆ ಎಂದು ಪಿಚೈ ಹೇಳಿದ್ದಾರೆ.ನ್ಯೂಯಾರ್ಕ್ ಉನ್ನತ ಟೆಕ್ ಕಂಪನಿಗಳೊಂದಿಗೆ ಮೋದಿಯವರು ನಡೆಸಿರುವ ಚರ್ಚೆಯನ್ನು ಉಲ್ಲೇಖಿಸಿರುವ ಪಿಚೈ ಅವರು ಭಾರತದಲ್ಲಿ ಕೃತಕ ಬುದ್ಧಿಮತ್ತೆತೆ ವಿಸ್ತರಣೆ ಮತ್ತು ಅದು ನಾಗರಿಕರಿಗೆ ಹೇಗೆ ಪ್ರಯೋಜನಕಾರಿಯಾಗಲಿದೆ ಎನ್ನುವುದಕ್ಕೆ ಪ್ರಧಾನ ಮಂತ್ರಿ ಅವರು ಸ್ಪಷ್ಟ ದೃಷ್ಟಿ ಹೊಂದಿದ್ದಾರೆ ಎಂದು ಪಿಚೈ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ಬದಲಿಸುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಿದ್ದಾರೆ. ಇದು ಡಿಜಿಟಲ್ ಇಂಡಿಯಾ ದೃಷ್ಟಿಯಾಗಿದ್ದು, ಭಾರತದಲ್ಲಿ ತಯಾರಿಕೆಯನ್ನು ಮುಂದುವರೆಸಲು ಕ್ರಮ ರೂಪಿಸಿದ್ದಾರೆ ಎಂದು ಹೇಳಿದರು.ಈಗ ಪಿಕ್ಸೆಲ್ ಫೋನ್ ಗಳನ್ನು ಭಾರತದಲ್ಲಿ ತಯಾರಿಸುವುದಕ್ಕೆ ನಾವು ಹೆಮ್ಮೆ ಪಡುತ್ತಿದ್ದೇವೆ. ಭಾರತದ ಜನರಿಗೆ ಕೃತಕ ಬುದ್ಧಿಮತ್ತೆತೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹೇಗೆ ಕಾರ್ಯಕ್ರಮ ರೂಪಿಸಬಹುದೆ ಎಂದು ಪ್ರಧಾನ ಮೋದಿ ಚಿಂತಿಸುತ್ತಿದ್ದಾರೆ ಎಂದು ಪಿಚೈ ಹೇಳಿದ್ದಾರೆ.