ಅಗತ್ಯಬಿದ್ದರೆ ಉಗುರಿನೊಂದಿಗೆ ಹೋರಾಟ
ಜೆರುಸಲೆಂ (ಇಸ್ರೇಲ್), ಮೇ ೧೦- ಏಕಾಂಗಿಯಾಗಿ ಹೋರಾಟ ನಡೆಸಲು ನಾವು ಸಿದ್ಧರಿದ್ದು, ಅಗತ್ಯಬಿದ್ದರೆ ನಮ್ಮ ಉಗುರಿನ ಮೂಲಕವಾದರೂ ಯುದ್ದ ಮುಂದುವರೆಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ ನೆತನ್ಯಾಹು ತಿಳಿಸಿದ್ದಾರೆ. ಒಂದು ವೇಳೆ ಗಾಜಾದ ರಫಾದಲ್ಲಿ ಇಸ್ರೇಲ್ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಇಸ್ರೇಲ್‌ಗೆ ಪೂರೈಕೆಯಾಗುವ ಕೆಲವು ಶಸ್ತ್ರಾಸ್ತ್ರಗಳ ಸರಬರಾಜನ್ನು ನಿಲ್ಲಿಸಲಾಗುವುದು ಎಂಬ ಅಮೆರಿಕಾ ಅಧ್ಯಕ್ಷರ ಹೇಳಿಕೆಗೆ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.
೭೬ ವರ್ಷಗಳ ಹಿಂದೆ ನಡೆದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಮ್ಮ ವಿರುದ್ಧ ಹಲವರು ಎದುರಾಳಿಗಳಾಗಿದ್ದರು. ಆ ವೇಳೆ ನಮ್ಮಲ್ಲಿ ಶಸ್ತ್ರಾಸ್ತ್ರಗಳಿರಲಿಲ್ಲ. ಅದೂ ಅಲ್ಲದೆ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧವಿತ್ತು, ಆದರೆ ನಮ್ಮಲ್ಲಿ ಉತ್ಸಾಹ, ಶೌರ್ಯ ಮತ್ತು ಏಕತೆಯ ಹೆಚ್ಚಿನ ಶಕ್ತಿಯಿಂದ ನಾವು ಅಂತಿಮವಾಗಿ ವಿಜಯಶಾಲಿಯಾಗಿದ್ದೆವು. ಶಕ್ತಿಯೊಂದಿಗೆ, ದೇವರ ಸಹಾಯದಿಂದ ಉಗುರಿನ ಮೂಲಕವಾದರೂ ಹೋರಾಡಿ ನಾವು ಒಟ್ಟಿಗೆ ವಿಜಯಶಾಲಿಯಾಗುತ್ತೇವೆ ಎಂದು ನೆತನ್ಯಾಹು ತಿಳಿಸಿದ್ದಾರೆ. ಇನ್ನು ನಿರಂತರ ಬಾಂಬ್ ಸ್ಫೋಟದ ನಡುವೆ ಸೋಮವಾರದಿಂದ ೮೦,೦೦೦ ಕ್ಕೂ ಹೆಚ್ಚು ಜನರು ರಫಾದಿಂದ ಪಲಾಯನ ಮಾಡಿದ್ದಾರೆ. ಅಲ್ಲದೆ ಇಸ್ರೇಲಿ ಟ್ಯಾಂಕ್‌ಗಳು ನಿರ್ಮಿತ ಪ್ರದೇಶಗಳ ಸಮೀಪದಲ್ಲಿ ಸಮೂಹವನ್ನು ಹೊಂದಿದೆ ಎನ್ನಲಾಗಿದೆ. ಈಗಾಗಲೇ ಗಾಜಾದಲ್ಲಿ ತೀವ್ರ ಪ್ರಮಾಣದ ದಾಳಿಯಿಂದ ಹೆಚ್ಚಿನ ನಾಗರಿಕರು ರಫಾದಲ್ಲಿ ಆಶ್ರಯ ಪಡೆದುಕೊಂಡಿದ್ದು, ಒಂದು ವೇಳೆ ಇಸ್ರೇಲ್ ಇಲ್ಲೂ ಕಾರ್ಯಾಚರಣೆ ನಡೆಸಿದರೆ ಆಗ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರು ಹತ್ಯೆಗೀಡಾಗಲಿದ್ದಾರೆ ಎನ್ನಲಾಗಿದೆ. ಹತ್ತಿರದ ಗಡಿ ಪ್ರದೇಶಗಳಲ್ಲಿ ನೆರವು ಲಭ್ಯವಾಗದ ಹಿನ್ನೆಲೆಯಲ್ಲಿ ನಗರದಲ್ಲಿ ಇನ್ನೂ ಆಶ್ರಯ ಪಡೆದಿರುವ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಆಹಾರ ಮತ್ತು ಇಂಧನ ಖಾಲಿಯಾಗುತ್ತಿದೆ ಎಂದು ಯುಎನ್ ಎಚ್ಚರಿಸಿದೆ. ಇಸ್ರೇಲಿ ಪಡೆಗಳು ತಮ್ಮ ಕಾರ್ಯಾಚರಣೆಯ ಪ್ರಾರಂಭದಲ್ಲಿ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮುಚ್ಚಿದವು. ಇದರಿಂದ ಇಲ್ಲಿನ ನಾಗರಿಕರ ಪೂರೈಕೆ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಗರದಲ್ಲಿ ಉಳಿದಿರುವ ಹಮಾಸ್ ಘಟಕಗಳ ವಿರುದ್ಧ “ಉದ್ದೇಶಿತ ದಾಳಿ” ನಡೆಸಲಾಗುತ್ತಿದೆ ಎಂದು ಇಸ್ರೇಲಿ ಪಡೆಗಳು ಹೇಳಿವೆ. ಆದಾಗ್ಯೂ, ಇಸ್ರೇಲಿ ಸರ್ಕಾರವು ಪೂರ್ಣ ಪ್ರಮಾಣದ ಆಕ್ರಮಣವನ್ನು ತಳ್ಳಿಹಾಕಲು ನಿರಾಕರಿಸಿದೆ,