ವಲಸಿಗರ ಸಮಗ್ರ ತನಿಖೆಗೆಬೈಡೆನ್ ನಿರ್ಧಾರ
ವಾಷಿಂಗ್ಟನ್,ಮೇ.೧೦ ಅಮೇರಿಕಾದ ದಕ್ಷಿಣ ಗಡಿಯಲ್ಲಿ ಆಶ್ರಯ ಪಡೆದಿರುವ ವಲಸಿಗರ ಸಮಗ್ರ ತಪಾಸಣೆ ನಡೆಸಲು ಜೋ ಬೈಡೆನ್ ನೇತೃತ್ವದ ಆಡಳಿತ ಮುಂದಾಗಿದೆ.
ಆಶ್ರಯ ಪಡೆದಿರುವ ವಲಸಿಗರು ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರಾ ಅಥವಾ ಭಯೋತ್ಪಾದಕ ಸಂಪರ್ಕಗಳನ್ನು ಹೊಂದಿದ್ದಾರಾ ಎನ್ನುವುದನ್ನು ಪರಿಶೀಲಿಸಿ ವಲಸಿಗರಿಗೆ ಇರಲು ಅವಕಾಶ ಮಾಡಿಕೊಡುವುದು ಅಥವಾ ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ದರಿಸಿದೆ.
ಈ ವರ್ಷದ ನವಂಬರ್ ತಿಂಗಳಲ್ಲಿ ಅಮೇರಿಕಾ ಅಧ್ಯಕ್ಷ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರನ್ನು ಆಕರ್ಷಿಸಲು ಜೋ ಬೈಡೆನ್ ಆಡಳಿತ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಅದರಲ್ಲಿ ಇದು ಒಂದು ಎಂದು ಹೇಳಲಾಗಿದೆ.
ರಿಪಬ್ಲಿಕನ್ನರು ಅಮೆರಿಕಾದಲ್ಲಿ ವಲಸಿಗರಿಂದ ಸಮಸ್ಯೆ ಹೆಚ್ಚಿವೆ ಎನ್ನುವ ಗಂಭೀರ ಆರೋಪ ಮಾಡಿದ್ದು ಅದರಿಂದ ಹೊರ ಬರಲು ವಲಸೆ ಶಿಬಿರಗಳಲ್ಲಿ ಇರುವ ಮಂದಿಯ ಸಂಪೂರ್ಣ ತಪಾಸಣೆ ಮಾಡಲು ಜೋ ಬೈಡೆನ್ ಆಡಳಿತ ಮುಂದಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಗಡಿ ಭಾಗದಲ್ಲಿ ಭದ್ರತೆ ಹೆಚ್ಚಳ ಅಕ್ರಮ ಒಳಸುಳುವಿಕೆ ಕಡಿವಾಣ ಹಾಕುವುದೂ ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲು ಜೋ ಬೈಡೆನ್ ಆಡಳಿತ ಮುಂದಾಗಿದ್ದಾರೆ.
ಪ್ರಸ್ತಾವಿತ ನಿಯಮದ ಅಡಿಯಲ್ಲಿ, ಒಬ್ಬ ವ್ಯಕ್ತಿಯು ದೇಶಕ್ಕೆ ಆಗಮಿಸಿದ ಕೆಲವೇ ದಿನಗಳಲ್ಲಿ ಸಂಭವಿಸುವ ಆರಂಭಿಕ ಸ್ಕ್ರೀನಿಂಗ್ ಹಂತದಲ್ಲಿ ಪ್ರಕರಣಗಳನ್ನು ಆಲಿಸುವ ಆಶ್ರಯ ಅಧಿಕಾರಿಗಳು ಈಗ ಯಾರನ್ನಾದರೂ ಅಂತಿಮವಾಗಿ ದೇಶದಿಂದ ಹೊರಹಾಕಬೇಕೇ ಅಥವಾ ದೇಶದಲ್ಲಿ ಇರಿಸಿಕೊಳ್ಳಬೇಕೇ ಎನ್ನುವ ಕುರಿತು ಅವರ ಪೂರ್ವಾಪರ ವಿಚಾರಣೆ ಮಾಡಲು ಮುಂದಾಗಿದ್ದಾರೆ.
ಅಕ್ರಮ ವಲಸಿಗರು ಅಮೆರಿಕಾಕ್ಕೆ ಬೆದರಿಕೆ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ವಲಸಿಗರ ಬಗ್ಗೆ ಸಮಗ್ರ ಪರಿಶೀಲನೆ ಮಾಡಲು ಮತ್ತು ದೇಶದ ಗಡಿಯನ್ನು ರಕ್ಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ
“ಉದ್ದೇಶಿತ ನಿಯಮ ಭಯೋತ್ಪಾದನೆ, ರಾಷ್ಟ್ರೀಯ ಭದ್ರತೆ ಅಥವಾ ಕ್ರಿಮಿನಲ್ ಬಾರ್‍ನಿಂದಾಗಿ ವ್ಯಕ್ತಿಯನ್ನು ಆಶ್ರಯದಿಂದ ನಿರ್ಬಂಧಿಸಲಾಗಿದೆ ಎಂಬುದಕ್ಕೆ ಪುರಾವೆಗಳಿದ್ದರೆ ಅಂತವರನ್ನು ಕೆಲವೇ ದಿನಗಳಲ್ಲಿ ಗಡಿ ಪಾರು ಮಾಡಲು ಉದ್ದೇಶಿಸಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.