ಆರೋಪ ಪಟ್ಟಿಯಲ್ಲಿ ಎಎಪಿ, ಕೇಜ್ರಿ ಹೆಸರು ಉಲ್ಲೇಖ
ನವದೆಹಲಿ,ಮೇ೧೦:ಅಬಕಾರಿ ನೀತಿ ಉಲ್ಲಂಘಿಸಿರುವ ಭ್ರಷ್ಟಚಾರಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿಯಲ್ಲಿ ಆಮ್‌ಆದ್ಮಿ ಪಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್ ಅವರನ್ನು ಆರೋಪಪಟ್ಟಿಯಲ್ಲಿ ಸೇರಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
ಆಮ್ ಆದ್ಮಿ ಪಕ್ಷದ ಹೆಸರೂ ಸೇರಿದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಬಿಎಸ್‌ಆರ್ ನಾಯಕಿ ಕವಿತಾ ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ.
ಕಳೆದ ಮಾ. ೨೧ ರಂದು ರಾಜಧಾನಿ ದೆಹಲಿಯ ಅವರ ಅಧಿಕೃತ ನಿವಾಸದಿಂದ ಫೆಡರಲ್ ಏಜೆನ್ಸಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್‌ರಾವ್ ಅವರ ಎಂಎಲ್‌ಸಿ ಪುತ್ರಿ ಕವಿತಾ ಅವರನ್ನು ಮಾ.೧೫ ರಂದು ಹೈದ್ರಾಬಾದ್‌ನಲ್ಲಿ ಬಂಧಿಸಲಾಗಿತ್ತು.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಪಕ್ಷದ ಸಹೋದ್ಯೋಗಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಮನೀಷ್‌ಸಿಸೋಡಿಯಾ,ಎಐಪಿ ರಾಜ್ಯಸಭಾ ಸಂಸದ ಸಂಜಯ್‌ಸಿಂಗ್ ಇತರರೂ ಸೇರಿದಂತೆ ೧೮ ಜನರನ್ನು ಈ ಪ್ರಕರಣದಡಿ ಬಂಧಿಸಲಾಗಿದ್ದು, ಇದು ಜಾರಿ ನಿರ್ದೇಶನಾಲಯದ ೭ನೇ ಆರೋಪ ಪಟ್ಟಿಯಾಗಿದೆ.
ಸಿಂಗ್ ಅವರಿಗೆ ಕೆಲವು ದಿನಗಳ ಹಿಂದೆ ಈ ಪ್ರಕರಣಕ್ಕೆಸಂಬಂಧಿಸಿದಂತೆ ಜಾಮೀನು ನೀಡಲಾಗಿತ್ತು. ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಮತ್ತು ಪಕ್ಷದಲ್ಲಿನ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿರುವುದರಿಂದ ಕೇಜ್ರಿವಾಲ್ ತನಿಖೆಯಲ್ಲಿ ಅಸಹಾಕಾರ ಮತ್ತು ಎಎಪಿ ಅಪರಾಧಕ್ಕೆ ಹೊಣೆಗಾರರನ್ನಾಗಿಸುವ ಆರೋಪವನ್ನು ಇಡಿ ಅವರ ಮೇಲೆ ಮಾಡಿದೆ.
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರ ೨೦೧೧-೧೨ರ ಅಬಕಾರಿ ನೀತಿ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚವನ್ನು ಪಾವತಿಸಿದೆ. ಕೆಲ ಡೀಲರ್‌ಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿತ್ತು.
ಆನಂತರ ಜಾರಿನಿರ್ದೇಶನಾಲಯದಲ್ಲಿ ಮನಿ ಲ್ಯಾಂಡರಿಂಗ್ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.