ಪವನ್ ಕಲ್ಯಾಣ್‌ಗೆ ತಾರಾ ನಟರ ಬೆಂಬಲ
ಹೈದ್ರಾಬಾದ್.ಮೇ.೧೦-ಆಂಧ್ರಪ್ರದೇಶದಲ್ಲಿ ಚುನಾವಣೆ ಕಾವು ಜೋರಾಗಿದೆ. ತೆಲುಗಿನ ತಾರಾ ನಟ ಪವನ್ ಕಲ್ಯಾಣ್ ಬೆಂಬಲಕ್ಕೆ ತೆಲುಗಿನ ಮತ್ತೋರ್ವ ಹೆಸರಾಂತ ನಟ ಅಲ್ಲು ಅರ್ಜು ಬೆಂಬಲಕ್ಕೆ ನಿಂತಿದ್ದಾರೆ. ಪವನ್ ಕಲ್ಯಾಣ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ದಿನಕ್ಕೊಂದು ಬೆಳವಣಿಗೆ ಪಡೆಯುತ್ತಿದೆ. ಮೈತ್ರಿ ಪಕ್ಷಗಳನ್ನು ಬಲವರ್ಧನೆಗೆ ಕಸರತ್ತು ಮಾಡಲಾಗುತ್ತಿದೆ. ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಸೋಲಿಸಲು ಒಂದು ಕಡೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಟೊಂಕ ಕಟ್ಟಿ ನಿಂತಿದ್ದರೆ, ಅದರ ಬೆಂಬಲಕ್ಕೆ ಹೆಸರಾಂತ ನಟ ಚಿರಂಜೀವಿ ಕೂಡ ಇರುವುದಾಗಿ ಘೋಷಣೆ ಮಾಡಿದ್ದಾರೆ.
ಪವನ್ ಅವರ ಸಮಾಜಸೇವೆಯನ್ನೂ ಅವರು ಶ್ಲಾಘಿಸಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಲಿಗಾಗಿ ಸರ್ವ ಪಕ್ಷಗಳು ಒಂದಾಗಿವೆ. ಪವನ್ ಕಲ್ಯಾಣ್ ಬೆಂಬಲ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಚಿರಂಜೀವಿ.ಒಳ್ಳೆಯ ಆಡಳಿತಕ್ಕಾಗಿ ಜನಸೇನಾ ಮತ್ತು ಮೈತ್ರಿಕೂಟವನ್ನು ಬೆಂಬಲಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪವನ್ ಕಲ್ಯಾಣ್ ಮತ್ತು ಅವರ ಪಕ್ಷದ ಪರವಾಗಿಯೂ ಪ್ರಚಾರಕ್ಕೆ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮೇ ೧೩ರಂದು ಆಂಧ್ರಪ್ರದೇಶದ ಚುನಾವಣೆ ನಡೆಯುತ್ತಿದೆ. ಪವನ್ ಕಲ್ಯಾಣ್ ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಈಗಾಗಲೇ ಮತದಾರನ ಒಲವು ಪವನ್ ಕಲ್ಯಾಣ್ ಕಡೆ ಇದೆ ಎಂದು ಹೇಳಲಾಗುತ್ತಿದೆ. ನಟ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಪವನ್ ಕಲ್ಯಾಣ್ ಪರ ಮತಯಾಚನೆ ಮಾಡುವ ಇಂಗಿತ ವ್ಯಕ್ತ ಪಡಿಸಿದ್ದಾರೆ.