ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೯:ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ ಶೇ. ೭೩.೪೦ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗಿಂತ ಈ ವರ್ಷ ಫಲಿತಾಂಶ ಇಳಿಕೆಯಾಗಿದೆ. ಕಳೆದ ಬಾರಿ ಶೇ. ೮೩.೮೯ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ. ೧೦.೪ರಷ್ಟು ಫಲಿತಾಂಶ ಕುಸಿತವಾಗಿದೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕಿಯರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.ಬಾಗಲಕೋಟೆಯ ಅಂಕಿತಾ ಬಸಪ್ಪ ಎಂಬ ವಿದ್ಯಾರ್ಥಿನಿ ೬೨೫ಕ್ಕೆ ೬೨೫ ಅಂಕವನ್ನು ಪಡೆದು ಪ್ರಥಮ ರ್‍ಯಾಂಕ್ ಗಳಿಸಿದ್ದರೆ. ೭ ವಿದ್ಯಾರ್ಥಿಗಳು ೬೨೫ಕ್ಕೆ ೬೨೪ ಅಂಕಗಳಿಸಿ ೨ನೇ ರ್‍ಯಾಂಕ್‌ನ್ನು ಹಂಚಿಕೊಂಡಿದ್ದಾರೆ.ಎಸ್.ಎಸ್.ಎಲ್.ಸಿ ಫಲಿತಾಂಶದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅಧ್ಯಕ್ಷೆ ಪೂರ್ಣಿಮಾ ಹಾಗೂ ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಅವರು ವಿವರಗಳನ್ನು ನೀಡಿದರು. ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಫಲಿತಾಂಶದಲ್ಲಿ ಮುಂದಿದ್ದು, ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಒಟ್ಟಾರೆ ಫಲಿತಾಂಶ ೭೪.೧೭ರಷ್ಟಿದ್ದರೆ, ನಗರ ಪ್ರದೇಶದ ವಿದ್ಯಾರ್ಥಿಗಳು ಶೇಕಡಾವಾರು ಫಲಿತಾಂಶ ಶೇ.೭೨.೮೩ರಷ್ಟಿದೆ. ಈ ವರ್ಷ ೮,೫೯,೯೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ ೬,೩೧,೨೦೪ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಬಾರಿಯ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. ೩೦ರಷ್ಟು ಕಡಿಮೆಯಾಗಿದೆ. ಕೃಪಾಂಕವನ್ನು ನೀಡಿ ಫಲಿತಾಂಶ ಶೇ. ೭೩.೪೦ಗೆ ಬಂದು ನಿಂತಿದೆ. ಕೃಪಾಂಕವನ್ನು ಕಳೆದ ಬಾರಿಗಿಂತ ಶೇ. ೧೦ರಷ್ಟು ಹೆಚ್ಚು ನೀಡಲಾಗಿದೆ.ಮೊದಲ ಬಾರಿಗೆ ವೆಬ್‌ಕಾಸ್ಟಿಂಗ್ ವಿಧಾನವನ್ನು ಪರಿಚಯಿಸಿದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಿಮೆಯಾಗಿರುವ ಫಲಿತಾಂಶವನ್ನು ಉತ್ತಮ ಪಡಿಸಲು ಸರ್ಕಾರ ನಿರ್ಧರಿಸಿದೆ ಈ ಹಿನ್ನೆಲೆಯಲ್ಲಿ ಒಂದು ಬಾರಿಯ ಕ್ರಮವಾಗಿ ೨೦೨೪ರ ಎಲ್ಲ ಮೂರು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಎಲ್ಲ ವಿಷಯಗಳಲ್ಲಿ ನೀಡುವ ಕೃಪಾಂಕವನ್ನು ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. ೩೫ ರಿಂದ ಶೇ. ೨೫ಕ್ಕೆ ಇಳಿಸಲಾಗಿದೆ. ಮತ್ತು ಕೃಪಾಂಕದ ಪ್ರಮಾಣವನ್ನು ಶೇ ೨೦ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದ ನಂತರ ಒಟ್ಟಾರೆ ಫಲಿತಾಂಶವು ಶೇ ೭೩.೪೦ ಆಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಬಾಲಕಿಯರ ಒಟ್ಟಾರೆ ಉತ್ತೀರ್ಣತೆ ಶೇ ೮೧.೧೧ರಷ್ಟಿದ್ದರೆ ಬಾಲಕರ ಉತ್ತೀರ್ಣತಾ ಪ್ರಮಾಣ ಶೇ. ೬೫.೯೦ರಷ್ಟಿದೆ.ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ೨ನೇ ಸ್ಥಾನ, ಶಿವಮೊಗ್ಗ ೩ನೇ ಸ್ಥಾನ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ. ೨೫ ರಿಂದ ಏ. ೬ರವರೆಗೂ ಒಟ್ಟು ೨,೭೫೦ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಒಟ್ಟಾರೆ ೮,೫೯,೯೬೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏ. ೧೫ ರಿಂದ ಏ.೨೪ರವರೆಗೂ ರಾಜ್ಯದ ೩೫ ಶೈಕ್ಷಿಣಿಕ ಜಿಲ್ಲೆಗಳ ೨೩೭ ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿತ್ತು ೬೧,೧೬೦ ಮೌಲ್ಯಮಾಪಕರು ಇದರಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್hಣಣಠಿs://ಞಚಿಡಿಡಿesuಟಣs.ಟಿiಛಿ.iಟಿನೋಡಬಹುದಾಗಿದ್ದು, ಶಾಲಾ ಹಂತದಲ್ಲೇ ಅಂಕಪಟ್ಟಿಯನ್ನು ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಗರದ ಮಲ್ಲೇಶ್ವರಂನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಮಂಜುಶ್ರೀ ಅವರು ಪತ್ರಿಕಾಗೋಷ್ಠಿಯಲ್ಲಿಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದರು. ಅಧಿಕಾರಿಗಳು ಇದ್ದಾರೆ.
೨ಮತ್ತು ೩ ಪರೀಕ್ಷೆ ಬರೆಯಬಹುದು
ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾದವರು ಮತ್ತೆ ಪರೀಕ್ಷೆ ೨ ಮತ್ತು ಪರೀಕ್ಷೆ ೩ನೇ ಪರೀಕ್ಷೆಯನ್ನು ಬರೆದು ಪಾಸಾಗಬಹುದಾಗಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವವರೂ ಸಹ ಅಂಕ ಹೆಚ್ಚಿಸಿಕೊಳ್ಳಲು ಮತ್ತೆ ಪರೀಕ್ಷೆ ೨ ಮತ್ತು ೩ ಬರೆಯಬಹುದು.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಈ ತಿಂಗಳ ೧೬ ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಈ ತಿಂಗಳ ೨೨ ಕಡೆಯ ದಿನ.
ಅಂಕಪಟ್ಟಿಗಳ ಮರು ಎಣಿಕೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮರು ಎಣಿಕೆಗೆ ಭೌತಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಉತ್ತೀರ್ಣತಾ ಪ್ರಮಾಣ ಹೆಚ್ಚಿದ್ದು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಉತ್ತೀರ್ಣತಾ ಪ್ರಮಾಣ ಶೇ. ೬೯.೩೪ರಷ್ಟಿದ್ದರೆ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಉತ್ತೀರ್ಣತಾ ಪ್ರಮಾಣ ೮೮.೨೯ರಷ್ಟಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೭,೬೬೪ ವಿದ್ಯಾರ್ಥಿಗಳು ೧೨೫ಕ್ಕೆ ೧೨೫ ಅಂಕ ಪಡೆದಿದ್ದರೆ, ದ್ವಿತೀಯ ಭಾಷೆಯಲ್ಲಿ ೫,೫೮೩ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ. ದ್ವಿತೀಯ ೧೦,೮೯೦ ವಿದ್ಯಾರ್ಥಿಗಳೂ ೧೦೦ಕ್ಕೆ ೧೦೦ ಅಂಕ ಪಡೆದಿದ್ದರೆ ಗಣಿತದಲ್ಲಿ ೭೮೪ ವಿದ್ಯಾರ್ಥಿಗಳು ೧೦೦ಕ್ಕೆ ೧೦೦, ವಿಜ್ಞಾನದಲ್ಲಿ ೨೭೭ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಪಡೆದಿದರೆ ಸಮಾಜವಿಜ್ಞಾನದಲ್ಲಿ ೨೦೬೦ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕ ಪಡೆದಿದ್ದಾರೆ.
ಒಬ್ಬರಿಗೆ ಮೊದಲ ರ್‍ಯಾಂಕ್
ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಗಲಕೋಟೆಯ ಒಬ್ಬ ವಿದ್ಯಾರ್ಥಿ ೬೨೫ಕ್ಕೆ ೬೨೫ ಅಂಕ ಪಡೆದು ಮೊದಲ ಅಂಕ ಪಡೆದಿದ್ದರೆ. ೭ ವಿದ್ಯಾರ್ಥಿಗಳು ೬೨೫ಕ್ಕೆ ೬೨೪ ಅಂಕ ಪಡೆದು ೨ನೇ ರ್‍ಯಾಂಕ್ ಹಂಚಿಕೊಂಡಿದ್ದಾರೆ. ೧೪ ವಿದ್ಯಾರ್ಥಿಗಳು ೬೨೩ ಅಂಕ ಪಡೆದು ೩ನೇ ರ್‍ಯಾಂಕ್ ಹಂಚಿಕೊಂಡಿದ್ದರೆ, ೨೧ ವಿದ್ಯಾರ್ಥಿಗಳು ೬೨೨ ಅಂಕ ಪಡೆದು ೪ನೇ ರ್‍ಯಾಂಕ್ ಹಂಚಿಕೊಂಡಿದ್ದು, ೪೪ ವಿದ್ಯಾರ್ಥಿಗಳು ೬೨೧ ಅಂಕ ಪಡೆದು ೫ನೇ ರ್‍ಯಾಂಕ್ ಹಂಚಿಕೊಂಡಿದ್ದಾರೆ. ೬೪ ವಿದ್ಯಾರ್ಥಿಗಳು ೬೨೦ ಅಂಕ ಪಡೆದು ೬ನೇ ರ್‍ಯಾಂಕ್‌ನ್ನು ಹಂಚಿಕೊಂಡಿದ್ದಾರೆ.
ಪರೀಕ್ಷೆ -೨ರ ವೇಳಾಪಟ್ಟಿ
ಈ ಸಾಲಿನ ಎಸ್‌ಎಸ್‌ಎಲ್‌ಸಿ ೨ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಪ್ರಕಟಿಸಿದ್ದು, ಜೂ ೭ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ೨ ಆರಂಭವಾಗಲಿದ್ದು, ಜೂ ೧೪ರವರೆಗೂ ನಡೆಯಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾಗಿರುವವರು ಈ ಪರೀಕ್ಷೆಯನ್ನು ಬರೆಯಬಹುದಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ೧ ರಲ್ಲಿ ಉತ್ತೀರ್ಣಗೊಂಡು ಅಂಕ ಹೆಚ್ಚಿಸಿಕೊಳ್ಳಲು ಬಯಸುವವರೂ ಸಹ ಪರೀಕ್ಷೆ ೨ ಬರೆಯಲು ಅವಕಾಶವಿದೆ.
ಗ್ರೇಸ್ ಮಾರ್ಕ್ಸ್ ಕೊಟ್ಟರೂ ಫಲಿತಾಂಶ ಕುಸಿತ
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶೇ. ೨೦ ರಷ್ಟು ಕೃಪಾಂಕ (ಗ್ರೇಸ್‌ಮಾರ್ಕ್ಸ್)ಕೊಟ್ಟರೂ ಕಡಿಮೆಯಾಗಿದೆ.ಜತೆಗೆ ಶಾಲಾ ಪರೀಕ್ಷಾ ಮಂಡಳಿ ಉತ್ತೀರ್ಣದ ಕನಿಷ್ಠ ಅಂಕವನ್ನು ಶೇ. ೩೫ ರಿಂದ ೨೫ಕ್ಕೆ ಇಳಿಸಿತ್ತು. ಇಷ್ಟಾದರೂ ಫಲಿತಾಂಶ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.