ಬ್ರೇಜಿಲ್ ಪ್ರವಾಹ: ಸತ್ತವರ ಸಂಖ್ಯೆ ೧೦೦
ಪೋರ್ಟೋ ಅಲೆಗ್ರೆ (ಬ್ರೇಜಿಲ್).ಮೇ.೯- ಬ್ರೇಜಿನ್‌ನ ರಿಯೊ ಗ್ರ್ಯಾಂಡೆ ಡು ಸಲ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಒಂದು ಲಕ್ಷ ಮಂದಿ ಮನೆ ಕಳೆದುಕೊಂಡಿದ್ದು ಸಾವಿನ ಸಂಖ್ಯೆ ನೂರಕ್ಕೇರಿದೆ.
ಕಳೆದ ಒಂದು ವಾರದಿಂದ ಬ್ರೇಜಿಲ್‌ನಲ್ಲಿ ದಾಖಲೆಯ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಪ್ರವಾಹ ಮತ್ತು ನದಿ ನೀರು ಉಕ್ಕಿ ಹರಿಯುತ್ತಿದ್ದು ಸುಮಾರು ೧.೪೫ ಮಿಲಿಯನ್ ಜನರಿಗೆ ಹಾನಿಯಾಗಿದೆ. ೨ಲಕ್ಷ ಮಂದಿ ಮನೆ ಬಿಟ್ಟು ಹೊರಬಂದಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನಿರಾಶ್ರಿತರು ಪೊರ್ಟೊ ಅಲಗ್ರೆಯಲ್ಲಿರುವ ಸ್ಟೇಟ್ ಸೆಂಟರ್ ಫಾರ್ ಸ್ಪೋರ್ಟ್ಸ್ ಟ್ರೇನಿಂಗ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಅರ್ಜೆಂಟಿನಾ ಮತ್ತು ಉರುಗ್ವೆ ಗಡಿಭಾಗಗಳಲ್ಲಿ ಚಂಡಮಾರುತ ಎದುರಾಗಿದ್ದು ಕೃಷಿ ಬೆಳೆಗಳಿಗೆ ಹಾನಿಯಾಗಿದ್ದು ತರ್ತುಪರಿಸ್ಥಿತಿ ಘೋಷಿಸಲಾಗಿದೆ.
ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯ ಮುಂದುವರೆಯಲಿದೆ ಎಂದು ಬ್ರೇಜಿಲ್ ಲೂಹಿಜ್ ಇನಾಸಿಯೊ ಭರವಸೆ ಮೂಡಿಸಿದ್ದಾರೆ.
ಹದಿನೈದು ಸಾವಿರ ಸೈನಿಕರು, ಅಗ್ನಿ ಶಾಮಕ ದಳ ಸಿಬ್ಬಂದಿ, ಪೊಲೀಸರು ಮತ್ತು ಸ್ವಯಂಸೇವಕರು ಜನರನ್ನ ರಕ್ಷಿಸಲು ಕಾರ್ಯ ನಿರ್ವಹಿಸುತ್ತಿದ್ದಾರೆ.