೫,೪೫೭ ಅಕ್ರಮ ವಲಸಿಗರ ಗಡಿಪಾರಿಗೆ ಸಜ್ಜು
ಇಂಫಾಲ್(ಮಣಿಪುರ).ಮೇ೯: ಮಣಿಪುರದ ಕಾಮ್‌ಜೋಂಗ್ ಜಿಲ್ಲೆಯಲ್ಲಿ ಪತ್ತೆಯಾಗಿರುವ ೫,೪೫೭ ಅಕ್ರಮ ವಲಸಿಗರ ಗಡಿ ಪಾರಿಗೆ ಮಣಿಪುರ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಕಾಮ್‌ಜೊಂಗ್ ಜಿಲ್ಲೆಯಲ್ಲಿ ೫.೪೫೪ ವಲಿಸಿಗರನ್ನು ಗುರುತಿಸಿದ್ದು, ಅವರನ್ನು ಗಡಿಪಾರು ಮಾಡಲು ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ವಲಿಸಿಗರು ತಂಗಿದ್ದ ಪ್ರದೇಶದಲ್ಲಿ ಅವರನ್ನು ಬಯೊಮೆಟ್ರಿಕ್ ಡೇಟಾವನ್ನು ಈ ಹಿಂದೆ ದಾಖಲು ಮಾಡಲಾಗಿತ್ತು ಅವರು ಅಕ್ರಮ ವಲಿಸಿಗರೆಂದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ತಿಳಿಸಿದ್ದಾರೆ.
ಎಲ್ಲ ಅಕ್ರಮ ವಲಸಿಗರಿಗೆ ನಮ್ಮ ಸರ್ಕಾರವು ಮಾನವೀಯ ನೆರವನ್ನು ನೀಡುತ್ತಿದೆ. ಈ ವಿಚಾರವನ್ನು ನಾವು ಅತ್ಯಂತ ಗಂಭೀರ ಹಾಗೂ ಸೂಕ್ಮವಾಗಿ ಪರಿಶೀಲಿಸಲಾಗಿದೆ ಎಂದು ಸಿಎಂ ಸೋರೆನ್ ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮ್ಯಾನ್ಮಾರ್ ಗಡಿ ದಾಟಿ ಮಣಿಪುರಕ್ಕೆ ಬಂದಿದ್ದ ಕನಿಷ್ಠ ೩೮ ಅಕ್ರಮ ವಲಸಿಗರನ್ನು ತೆಂಗ್‌ನೌಪಾಲ್ ಜಿಲ್ಲೆ ಮೊರೆಹ್ ಪಟ್ಟಣದಿಂದ ಈಗಾಗಲೇ ಗಡಿಪಾರು ಮಾಡಲಾಗಿದೆ ಎಂದೂ ಸಿಂಗ್ ತಿಳಿಸಿದ್ದಾರೆ. ಈವರೆಗೆ, ಮೊದಲ ಹಂತದಲ್ಲಿ ೭೭ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.