ಲಕ್ನೊ ವಿರುದ್ಧ ಟ್ರಾವಿಸ್ ಹೆಡ್ ರನ್ ಅಭಿಷೇಕ
ಹೈದ್ರಾಬಾದ್: ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ತಂಡ ಲಕ್ನೊ ವಿರುದ್ಧ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸನ್ ರೈಸರ್ಸ್ ಪ್ಲೇ ಆಫ್ ಸನಿಹಕ್ಕೆ ಸಾಗಿದೆ.
ಇಲ್ಲಿನ ಉಪ್ಪಾಳ ಅಂಗಳದಲ್ಲಿ ಟಾಸ್ ಗೆದ್ದ ಲಕ್ನೊ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಕ್ನೊ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಕಲೆ ಹಾಕಿತು. ಸನ್ ರೈಸರ್ಸ್ 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 167 ರನ್ ಗಳಿಸಿತು.
166 ರನ್ ಗುರಿ ಪಡೆದ ಸನ್ ರೈಸರ್್ಗೆ ಓಪನರ್ಗಳಾದ ಟ್ರಾವಿಸ್್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಟ್ರಾವಿಸ್ ಹೆಡ್ 30 ಎಸೆತ, 8 ಬೌಂಡರಿ, 8 ಸಿಕ್ಸರ್ ಒಟ್ಟು ಅಜೇಯ 89 ರನ್, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 75 ರನ್ ಹೊಡೆದರು. ಕೇವಲ 45 ನಿಮಿಷಗಳಲ್ಲಿ ಚೇಸ್ ಮಾಡಿದರು.
ಇದಕ್ಕೂ ಮುನ್ನ ಆಯೂಷ್ ಬದೋನಿ ಮತ್ತು ನಿಕೊಲೊಸ್ ಪೂರಾನ್ ಅಮೋಘ ಜತೆಯಾಟದ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ಸನ್ರೈಸರ್ಸ್ಗೆ ಸವಾಲಿನ ಗುರಿ ನೀಡಿತು.
ಲಕ್ನೊ ತಂಡಕ್ಕೆ ಉತ್ತಮ ಆರಂಭಸಿಗಲಿಲ್ಲ. ವೈಫಲ್ಯ ಮುಂದುವರೆಸಿದ ಕ್ವಿಂಟಾನ್ ಡಿಕಾಕ್ (2ರನ್) ವೇಗಿ ಭುವನೇಶ್ವರ್ಗೆ ವಿಕೆಟ್ ಒಪ್ಪಿಸಿದರು. ಆಲ್ರೌಂಡರ್ ಮಾಕರ್ಸ್ ಸ್ಟೋಯ್ನಿಸ್ (3 ರನ್) ವೇಗಿ ಭುವನೇಶ್ವರ್ಗೆ ಬಲಿಯಾದರು. 29 ರನ್ ಗಳಿಸಿದ್ದ ಕೆ.ಎಲ್.ರಾಹುಲ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.ಕೃಣಾಲ್ ಪಾಂಡ್ಯ (24ರನ್) ರನೌಟ್ ಬಲೆಗೆ ಬಿದ್ದರು.
66 ಕ್ಕೆ 4 ವಿಕೆಟ್ ಕಳೆದುಕೊಂಡಿದ್ದಾಗ ನಿಕೊಲೋಸ ಪೂರಾನ್ (ಅಜೇಯ 48) ಮತ್ತು ಆಯುಷ್ ಬದೋನಿ (ಅಜೇಯ 55ರನ್) 99 ರನ್ ಜತೆಯಾಟ ನೀಡಿ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾದರು.
ಸನ್ರೈಸರ್ಸ್ ಪರ ಭುವನೇಶ್ವರ್ 12ಕ್ಕೆ2, ಪ್ಯಾಟ್ ಕಮಿನ್ಸ್ 47ಕ್ಕೆ1 ವಿಕೆಟ್ ಪಡೆದರು.