ಕರ್ನಾಟಕ ಮತ್ತು ಅಸ್ಸಾಂ ರಾಜ್ಯಪಾಲರು ವೆಲ್ಲೂರು ಗೋಲ್ಡನ್ ಟೆಂಪಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡರು
ವೆಲ್ಲೂರ್ – ಮೇ 8, 2024 – ಗೌರವಾನ್ವಿತ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್, ಅಸ್ಸಾಂನ ಗೌರವಾನ್ವಿತ ಗವರ್ನರ್ ಗುಲಾಬ್ ಚಂದ್ ಕಟಾರಿಯಾ ಅವರು ಗೋಲ್ಡನ್ ಟೆಂಪಲ್ ನ ಶ್ರೀ ಶಕ್ತಿ ಅಮ್ಮನವರ 32ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ದರು.
ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಗೌರವಾನ್ವಿತ ರಾಜಪಾಲರುಗಳು ಮತ್ತು ಶ್ರೀ ನಾರಾಯಣಿ ಪೀಠದ ವಾರ್ಷಿಕೋತ್ಸವದ ಸ್ಮರಣಾರ್ಥ ಮತ್ತು ಶ್ರೀ ಶಕ್ತಿ ಅಮ್ಮನವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ಶ್ರೀ ಥಾವರಚಂದ್ ಗೆಹ್ಲೋಟ್ ಅವರು ಈ ಪ್ರದೇಶದ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ತಮ್ಮ ಆಳವಾದ ಗೌರವವನ್ನು ವ್ಯಕ್ತಪಡಿಸಿದರು ಮತ್ತು ವಿವಿಧ ಸಮುದಾಯಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದರು.