ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಲಾಲೂ ವಿರುದ್ಧ ಮೋದಿ ಕಿಡಿ
ಇಂದೋರ್/ಪಾಟ್ನಾ,ಮೇ.೮- ಮುಸ್ಲಿಮರಿಗೆ “ಸಂಪೂರ್ಣ ಮೀಸಲಾತಿ”ಯನ್ನು ಬೆಂಬಲಿಸುವ ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಂಬಿಕೆ ಆಧಾರಿತ ಕೋಟಾ ಪರಿಚಯಿಸಲು ಕಾಂಗ್ರೆಸ್ ಮತ್ತು ಅದರ ಪಾಲುದಾರರು ಗುಪ್ತ ಕಾರ್ಯಸೂಚಿಯನ್ನು ಹೊಂದಿವೆ ಎಂದು ಇಂಡಿಯಾ ಮೈತ್ರಿಕೂಟದ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಧಾರ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಂಡಿಯಾ ಮೈತ್ರಿಕೂಟ ತುಷ್ಠೀಕರಣ ರಾಜಕಾರಣ ಮಾಡುತ್ತಿದೆ.ಈ ಮೂಲಕ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದು ಜೂ.೪ ರಂದು ಮತರದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ಧಾರೆ.
ಮುಸ್ಲಿಮರು ಮೀಸಲಾತಿ ಪಡೆಯಬೇಕು ಕೇವಲ ಮೀಸಲಾತಿ ಅಲ್ಲ ಆದರೆ ’ಸಂಪೂರ್ಣ ಮೀಸಲಾತಿ’. ಇದರರ್ಥ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಸಿಗುವ ಎಲ್ಲಾ ಮೀಸಲಾತಿಯನ್ನು ಕಿತ್ತು ಸಂಪೂರ್ಣವಾಗಿ ಮುಸ್ಲಿಮರಿಗೆ ನೀಡಲಾಗುವುದು. ಅವರು ಇದನ್ನು ಏಕೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಪಾಲುದಾರರು ಮತಬ್ಯಾಂಕ್ ಮತ್ತು ತುಷ್ಟೀಕರಣದ ರಾಜಕೀಯದ ಮೇಲೆ ಅವಲಂಬಿತರಾಗಿದ್ದಾರೆ. ವಿರೋದ ಪಕ್ಷದ ನಾಯಕ ಮನಸ್ಸನ್ನು ಎಕ್ಸ್-ರೇ ಮಾಡಿದ್ದೇನೆ.ಅವರಲ್ಲಿ ಮಸ್ಲಿಂ ಸಮುದಾಯದವರೇ ತುಂಬಿ ತುಳುಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಲಾಲು ತಿರುಗೇಟು
ಕಾಂಗ್ರೆಸ್ ಮತ್ತು ಅದರ ಪಾಲುದಾರರು ಕಳ್ಳತನದಿಂದ ಮುಸ್ಲಿಂ ಕೋಟಾವನ್ನು ಜಾರಿಗೆ ತರಲು ಯೋಜಿಸಿದ್ದಾರೆ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಆರೋಪದ ತೀಷ್ಣವಾಗಿ ಪ್ರತಿಕ್ರಿಯಿಸಿದ ಆರ್ ಜೆಸಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮುಸ್ಲಿಂ ಕೋಟಾ ಪರವಾಗಿ ಇರುವುದಾಗಿ ಹೇಳಿದ್ದಾರೆ
“ಮೀಸಲಾತಿಯ ಭಾಗವನ್ನು ಕಿತ್ತುಕೊಂಡು ಧರ್ಮದ ಆಧಾರದಲ್ಲಿ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ದ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಸಂವಿಧಾನಬದ್ದವಾಗಿ ಸಿಗುವ ಮೀಡಲಾತಿ ಎಲ್ಲರಿಗೂ ಸಿಗಲಿದೆ ಎಂದಿದ್ಧಾರೆ