ಡೆಲ್ಲಿ ಪ್ಲೇಆಫ್ ಆಸೆ ಜೀವಂತ
ನವದೆಹಲಿ: ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಸೊಗಸಾದ ಸ್ಪಿನ್ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 20 ರನ್ಗಳ ಗೆಲುವು ದಾಖಲಿಸಿದೆ.
ಮೊದಲಿ ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ರಾಜಸ್ಥಾನ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆ ಹಾಕಿತು.
ಡೆಲ್ಲಿ ಪರ ಜೇಕ್ ಫ್ರೇಸರ್ 50, ಅಭಿಷೇಕ್ ಪೋರೆಲ್ 65, ಶಾಯ್ ಹೋಪ್ 1, ಅಕ್ಷರ್ ಪಟೇಲ್ 15, ರಿಷಭ್ ಪಂತ್ 15, ಟ್ರಸ್ಟನ್ ಸ್ಟಬ್ಸ್ 41, ಗುಲ್ಬದ್ದೀನ್ ನೈಬ್ 19, ಸಲಾಂ 9, ಕುಲ್ದೀಪ್ 5 ರನ್ ಗಳಿಸಿದರು.
ರಾಜಸ್ಥಾನ ಪರ ಅಶ್ವಿನ್ 24ಕ್ಕೆ 3, ಬೌಲ್ಟ್, ಸಂದೀಪ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ರಾಜಸ್ಥಾನ ಪರ ಜೈಸ್ವಾಲ್ 4, ಬಟ್ಲರ್ 19, ಸಂಜು ಸ್ಯಾಮ್ಸನ್ 86, ರಿಯಾನ್ ಪರಾಗ್ 27, ದುಬೆ 25, ರೊವಮನ್ ಪೊವೆಲ್ 13 ರನ್ ಗಳಿಸಿದರು.
ಡೆಲ್ಲಿ ಪರ ಕುಲ್ದೀಪ್ 25ಕ್ಕೆ 2, ಮುಕೇಶ್ 30ಕ್ಕೆ 2, ಖಲೀಲ್ 47,ಕ್ಕೆ 2, ಅಕ್ಷರ್ ಪಟೇಲ್ ಮತ್ತು ರಸಿಕ್ ಸಲಾಂ ತಲಾ ಒಂದು ವಿಕೆಟ್ ಪಡೆದರು.