ಗುಲಬರ್ಗಾ ಲೋಕಸಭಾ ಚುನಾವಣೆ:ಅಂದಾಜು ಶೇ.62.27ರಷ್ಟು ಮತದಾನ
ಕಲಬುರಗಿ,ಮೇ.7: ಗುಲಬರ್ಗಾ ಲೋಕಸಭಾ (ಪ.ಜಾ) ಚುನಾವಣೆಗೆ ಮಂಗಳವಾರ ಮತದಾನ ನಡೆದಿದ್ದು, ಅಂದಾಜು ಶೇ.62.27 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
34-ಅಫಜಲಪೂರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.65.25, 35-ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.64.2, 36-ಚಿತ್ತಾಪೂರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.60.52, 39-ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.61.13, 41-ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.68.61, 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.61.7, 44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.57.56, 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.60.97 ರಷ್ಟು ಮತದಾನವಾಗಿದೆ.
ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆಗೆ ಹಕ್ಕು ಹೊಂದಿದ್ದರು.
ಮತದಾನ ಶಾಂತಿಯುತ,ಧನ್ಯವಾದ:
ಕ್ಷೇತ್ರದಾದ್ಯಂತ ಯಾವುದೇ ಅಹಿತಕರ ಘಟನೆ ಇಲ್ಲದೆ ಮತದಾನ ಶಾಂತಿಯುತವಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಹಗಲು-ರಾತ್ರಿ ಕೆಲಸ ನಿರ್ವಹಿಸಿದ ಎಲ್ಲಾ ಹಂತದ ಚುನಾವಣಾ ಅಧಿಕಾರಿ-ಸಿಬ್ಬಂದಿಗಳಿಗೆ ಹಾಗೂ ವಿಶೇಷವಾಗಿ ಬಿಸಿಲು ಲೆಕ್ಕಿಸದೆ ಮತದಾನ ಮಾಡಲು ಮುಂದೆ ಬಂದ ಮತದಾರ ಪ್ರಭುಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಧನ್ಯವಾದ ತಿಳಿಸಿದ್ದಾರೆ.
ಮತ ಎಣಿಕೆ:
ಮತದಾನ ಪ್ರಕ್ರಿಯೆ ಮುಕ್ತಾಯವಾಗಿರುವುದರಿಂದ ಎಲ್ಲಾ ಇ‌.ವಿ‌.ಎಂ ಮತಯಂತ್ರಗಳು ಮತಗಟ್ಟೆಯಿಂದ ಡಿ-ಮಸ್ಟರಿಂಗ್ ಸೆಂಟರ್ ತಲುಪಿ ಅಲ್ಲಿಂದ ನೇರವಾಗಿ ಗುಲಬರ್ಗಾ ವಿವಿ.ಸ್ಟ್ರಾಂಗ್ ರೂಂ ತಲುಪಲಿದ್ದು, ಜೂನ್ 4ಕ್ಕೆ ವಿ.ವಿ. ಆವರಣದ ವಿವಿಧ ವಿಭಾಗದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.