ಬಳ್ಳಾರಿ ಲೋಕಸಭೆ ಶೇ.73.59 ರಷ್ಟು ಮತದಾನ
ಬಳ್ಳಾರಿ, ಮೇ 07: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ, ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 08 ವಿಧಾನಸಭಾ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಕ್ಷೇತ್ರಗಳ 1,972 ಮತಗಟ್ಟೆಗಳಲ್ಲಿ ಮೇ 07 ಮಂಗಳವಾರದಂದು ಸುಸೂತ್ರ ಹಾಗೂ ಶಾಂತಿಯುತ ಮತದಾನ ನಡೆದಿದ್ದು ಶೇ.73.59 ರಷ್ಟು ಮತದಾನವಾಗಿದೆ.
ಬಳ್ಳಾರಿ ಗ್ರಾಮೀಣ – ಶೇ.72.08, ಬಳ್ಳಾರಿ ನಗರ – ಶೇ. 65.12, ಹೂವಿನಹಡಗಲಿ – ಶೇ.75.05, ಹಗರಿಬೊಮ್ಮನಹಳ್ಳಿ- ಶೇ.77.98, ಕಂಪ್ಲಿ – ಶೇ.78.91, ಕೂಡ್ಲಿಗಿ – ಶೇ.76.58, ಸಂಡೂರು – ಶೇ. 75.27, ವಿಜಯನಗರ – ಶೇ.70.33 ರಷ್ಟು ಮತದಾನವಾಗಿದೆ.
ಮತದಾನ ವಿವರ:
ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 18,84,040 ಮತದಾರರಿದ್ದು, ಅದರಲ್ಲಿ 13,86,520 ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ.
928857 ಪುರುಷ ಮತದಾರರಲ್ಲಿ 697349 ಪುರುಷರು (ಶೇ.75.08) ಮತ ಚಲಾಯಿಸಿದ್ದಾರೆ. 954914 ಮಹಿಳಾ ಮತದಾರರಲ್ಲಿ 689056 ಮಹಿಳೆಯರು (ಶೇ.72.16) ಮತದಾನ ಮಾಡಿದ್ದಾರೆ ಮತ್ತು 269 ಅಲ್ಪಸಂಖ್ಯಾತ ಮತದಾರರಲ್ಲಿ 115 ಮಂದಿ (ಶೇ.42.75) ಮತದಾನ ಮಾಡಿದ್ದಾರೆ.
ಜಿಲ್ಲೆಯಲ್ಲಿನ ಬಿರು ಬಿಸಿಲಿನ ತಾಪದ ಅರಿವಿದ್ದ ಮತದಾರರು ಮುಂಜಾನೆಯ ತಂಪು ಹೊತ್ತಿನಲ್ಲಿಯೇ ಹೋಗಿ ಮತ ಚಲಾಯಿಸಿಬಿಡೋಣ ಎಂಬ ಧಾವಂತದಲ್ಲಿ ಇದ್ದಿದ್ದು ಕಂಡುಬಂದಿತು. ಹೀಗಾಗಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ, ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡುಬಂದಿತು. ಚುನಾವಣಾ ಆಯೋಗದ ನಿಯಮದಂತೆ ಬೆಳಿಗ್ಗೆ 07 ಗಂಟೆಗೆ ಜಿಲ್ಲೆಯಾದ್ಯಂತ ಪ್ರಾರಂಭಗೊಂಡ ಮತದಾನ, ಆರಂಭದಲ್ಲಿ ಬಿರುಸಿನಿಂದ ಜರುಗಿತು. ಸೂರ್ಯ ನೆತ್ತಿಯ ಮೇಲೆ ಏರುತ್ತಿದ್ದಂತೆಯೇ ಮಧ್ಯಾಹ್ನದ ವೇಳೆಗೆ ಸ್ವಲ್ಪ ಮಂದಗತಿಯಲ್ಲಿ ಸಾಗಿದ ಮತದಾನ, ನಂತರ ಸಂಜೆ ವೇಳೆಗೆ ಇನ್ನಷ್ಟು ಬಿರುಸಿನಿಂದ ಸಾಗಿತು. ಮತದಾರರನ್ನು ಆಕರ್ಷಿಸಲು ಬಳ್ಳಾರಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಜಿಲ್ಲಾಡಳಿತದಿಂದ ವಿಭಿನ್ನ ಪರಿಕಲ್ಪನೆಯ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಕಲಚೇತನ ಮತಗಟ್ಟೆ, ಸಾಂಪ್ರದಾಯಿಕ ಮತ್ತು ವಿಷಯಾಧಾರಿತ ಮತಗಟ್ಟೆಗಳು ಆಕರ್ಷಕವಾಗಿದ್ದು, ಮತದಾರರನ್ನು ತನ್ನತ್ತ ಸೆಳೆಯುತ್ತಿದ್ದಂತೆ ಕಂಡುಬಂದಿತು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 1,219 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಕಂಪ್ಲಿ-242, ಸಿರುಗುಪ್ಪ-228, ಬಳ್ಳಾರಿ ಗ್ರಾಮೀಣ-235, ಬಳ್ಳಾರಿ ನಗರ-261 ಹಾಗೂ ಸಂಡೂರು ಕ್ಷೇತ್ರದ 253 ಮತಗಟ್ಟೆಗಳಲ್ಲಿ ಮತದಾನವು ಬಹುತೇಕ ಸುಸೂತ್ರ ಹಾಗೂ ಶಾಂತಿಯುತವಾಗಿ ನಡೆಯಿತು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಶೇಕಡಾವಾರು ಮತದಾನ ಪ್ರಮಾಣ ವಿವರ ಇಂತಿದೆ:
ಬೆಳಿಗ್ಗೆ 07 ಗಂಟೆಗೆ ಪ್ರಾರಂಭಗೊಂಡ ಮತದಾನ ಬೆ. 9 ಗಂಟೆಯವರೆಗೆ ಒಟ್ಟು ಶೇ.10.37 ಮತದಾನ ಪ್ರಮಾಣವಾಗಿದ್ದು, ಬಳ್ಳಾರಿ ಗ್ರಾಮೀಣ-ಶೇ.11.06, ಬಳ್ಳಾರಿ ನಗರ-ಶೇ.10.43, ಹೂವಿನಹಡಗಲಿ-ಶೇ.6.60, ಹಗರಿಬೊಮ್ಮನಹಳ್ಳಿ- ಶೇ.9.24, ಕಂಪ್ಲಿ – ಶೇ.13.06, ಕೂಡ್ಲಿಗಿ – ಶೇ.10.09, ಸಂಡೂರು – ಶೇ.9.91, ವಿಜಯನಗರ – ಶೇ.11.83 ರಷ್ಟು ಮತದಾನವಾಯಿತು.
ಬೆಳಿಗ್ಗೆ 11 ಗಂಟೆಯ ವೇಳೆಗೆ ಒಟ್ಟು ಶೇ.26.45 ಮತದಾನ ಪ್ರಮಾಣವಾಗಿದ್ದು, ಬಳ್ಳಾರಿ ಗ್ರಾಮೀಣ – ಶೇ.27.16, ಬಳ್ಳಾರಿ ನಗರ – ಶೇ.25.54, ಹೂವಿನಹಡಗಲಿ – ಶೇ.21.29, ಹಗರಿಬೊಮ್ಮನಹಳ್ಳಿ- ಶೇ.24.21, ಕಂಪ್ಲಿ – ಶೇ.31.53, ಕೂಡ್ಲಿಗಿ – ಶೇ.27.93, ಸಂಡೂರು – ಶೇ.25.70, ವಿಜಯನಗರ – ಶೇ.27.79 ರಷ್ಟು ಮತದಾನವಾಗಿದೆ.
ಮಧ್ಯಾಹ್ನ 01 ಗಂಟೆಯವರೆಗೆ ಒಟ್ಟು ಶೇ.44.36 ಮತದಾನ ಪ್ರಮಾಣವಾಗಿದ್ದು, ಬಳ್ಳಾರಿ ಗ್ರಾಮೀಣ – ಶೇ.44.05, ಬಳ್ಳಾರಿ ನಗರ – ಶೇ.40.98, ಹೂವಿನಹಡಗಲಿ – ಶೇ.40.30, ಹಗರಿಬೊಮ್ಮನಹಳ್ಳಿ- ಶೇ.43.34, ಕಂಪ್ಲಿ – ಶೇ.50.46, ಕೂಡ್ಲಿಗಿ – ಶೇ.47.46, ಸಂಡೂರು – ಶೇ.44.56, ವಿಜಯನಗರ – ಶೇ.44.28 ರಷ್ಟು ಮತದಾನವಾಗಿದೆ.
ಮಧ್ಯಾಹ್ನ 03 ಗಂಟೆಯವರೆಗೆ ಒಟ್ಟು ಶೇ.56.76 ಮತದಾನ ಪ್ರಮಾಣವಾಗಿದ್ದು, ಬಳ್ಳಾರಿ ಗ್ರಾಮೀಣ – ಶೇ.55.36, ಬಳ್ಳಾರಿ ನಗರ – ಶೇ.50.77, ಹೂವಿನಹಡಗಲಿ – ಶೇ.56.56, ಹಗರಿಬೊಮ್ಮನಹಳ್ಳಿ- ಶೇ.58.16, ಕಂಪ್ಲಿ – ಶೇ.63.03, ಕೂಡ್ಲಿಗಿ – ಶೇ.60.63, ಸಂಡೂರು – ಶೇ.56.97, ವಿಜಯನಗರ – ಶೇ.54.57 ರಷ್ಟು ಮತದಾನವಾಗಿದೆ.
ಸಂಜೆ 05 ಗಂಟೆಯವರೆಗೆ ಒಟ್ಟು ಶೇ.68.94 ಮತದಾನ ಪ್ರಮಾಣವಾಗಿದ್ದು, ಬಳ್ಳಾರಿ ಗ್ರಾಮೀಣ – ಶೇ.67.53, ಬಳ್ಳಾರಿ ನಗರ – ಶೇ.60.33, ಹೂವಿನಹಡಗಲಿ – ಶೇ.70.72, ಹಗರಿಬೊಮ್ಮನಹಳ್ಳಿ- ಶೇ.72.12, ಕಂಪ್ಲಿ – ಶೇ.74.61, ಕೂಡ್ಲಿಗಿ – ಶೇ.73.29, ಸಂಡೂರು – ಶೇ.70.09, ವಿಜಯನಗರ – ಶೇ.65.61 ರಷ್ಟು ಮತದಾನವಾಗಿದೆ.
ಕಳೆದ ಬಾರಿ 2019 ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗೆಯ ಹಡಗಲಿ ಕ್ಷೇತ್ರದಲ್ಲಿ ಶೇ.71.45, ಹಗರಿಬೊಮ್ಮನಹಳ್ಳಿ ಕ್ಷೇತ್ರ-ಶೇ.73.37, ವಿಜಯನಗರ-ಶೇ.68.59, ಕಂಪ್ಲಿ-ಶೇ.70.72, ಬಳ್ಳಾರಿ ಗ್ರಾಮೀಣ-ಶೇ.70.12, ಬಳ್ಳಾರಿ ನಗರ-ಶೇ.63.05, ಸಂಡೂರು-ಶೇ.71.16 ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.22 ರಷ್ಟು ಅಂದರೆ ಒಟ್ಟಾರೆ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶೇ.69.59 ರಷ್ಟು ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಈ ಹಿಂದಿನ ಚುನಾವಣೆಗಳನ್ನು ಅವಲೋಕಿಸಿದಾಗ 2019 ರಲ್ಲಿ ಶೇ. 69.59, 2018 (ಉಪಚುನಾವಣೆ)- ಶೇ. 61.12, 2014- ಶೇ. 69.53 ಹಾಗೂ 2009 ರ ಚುನಾವಣೆಯಲ್ಲಿ ಶೇ. 61.43 ರಷ್ಟು ಮತದಾನವಾಗಿರುವುದು ದಾಖಲಾಗಿದೆ.