ಅಮೆರಿಕದಿಂದ ಬಂದು ಹಕ್ಕು ಚಲಾಯಿಸಿದ ಸಿದ್ದೇಶ್ವರ್ ಮೊಮ್ಮಕ್ಕಳು
ದಾವಣಗೆರೆ,ಮೇ೭- ಇಂದು ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಮತಗಟ್ಟೆಗಳಿಗೆ ಯುವಕ-ಯುವತಿಯರು,ಹಿರಿಯ ಮತದಾರರು ಆಗಮಿಸಿ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ. ಇದೇ ವೇಳೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮೊಮ್ಮಕ್ಕಳು ಅಮೆರಿಕದಿಂದ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ.
ಸಿದ್ದೇಶ್ವರ್ ಅವರ ಮೊಮ್ಮಗ ಅತ್ರವ್ ಅಮೆರಿಕದಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಮತದಾನ ಮಾಡಲು ದಾವಣಗೆರೆಗೆ ಬಂದ ಅವರು ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಪ್ರಥಮ ಬಾರಿಗೆ ಮತದಾನ ಮಾಡಿದ್ದಾರೆ. ಮೊಮ್ಮಗಳು ತ್ರಿಷಾ ಕೂಡ ಮೊದಲ ಬಾರಿಗೆ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಅತ್ರವ್ ಮಾತನಾಡಿ ನಾನು ಅಮೆರಿಕದಿಂದ ಮತದಾನ ಮಾಡಲು ಇದೇ ಮೊದಲ ಬಾರಿಗೆ ಬಂದಿದ್ದೇನೆ. ಎಲ್ಲರೂ ತಪ್ಪದೆ ಮತ ಚಲಾಯಿಸಿ. ಈ ಮೂಲಕ ಸಮರ್ಥ ನಾಯಕನನ್ನು ಆಯ್ಕೆ ಮಾಡಿ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ತ್ರಿಶಾ, ಮೊದಲ ಬಾರಿಗೆ ಮತದಾನ ಮಾಡಿರುವುದು ನನಗೆ ಹೆಮ್ಮೆ ತಂದಿದೆ.
ಎಲ್ಲಾ ಭಾರತೀಯ ನಾಗರಿಕರು ಮತ ಚಲಾಯಿಸಬೇಕು ದೇಶದಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಹಕ್ಕು ನಮಗೂ ಇದೆ. ಮೊದಲ ಮತದಾನ ಮಾಡಿದ್ದು ಖುಷಿ ತಂದಿದೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.