ಕಲಾತ್ಮಕ ಸೀರೆಯಲ್ಲಿ ಮಿಂಚಿದ ಅಲಿಯಾ
ಲಂಡನ್,ಮೇ.೭-ಇತ್ತೀಚಿನ ದಿನಗಳಲ್ಲಿ ಆಲಿಯಾ ಭಟ್ ಸೀರೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರ ಆಲಿಯಾ ಸಿನಿಮಾದಲ್ಲಿ ಮಾತ್ರವಲ್ಲದೆ ಹೊರಗೂ ವಿಭಿನ್ನ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಆಲಿಯಾ ಸೀರೆಯಲ್ಲಿ ಮೆಟ್ ಗಾಲಾ ೨೦೨೪ (ಮೆಟ್ ಗಾಲಾ ೨೦೨೪) ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಳೆದ ವರ್ಷ ಮೊದಲ ಬಾರಿಗೆ ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದ ಆಲಿಯಾ ಇದೀಗ ಎರಡನೇ ಬಾರಿಗೆ ಈ ವಿಶೇಷ ಸೀರೆಯಲ್ಲಿ ಮಿಂಚಿದ್ದಾರೆ.
ಆಲಿಯಾ ಭಟ್ ಧರಿಸಿರುವ ಈ ಮಿನುಗುವ ಸೀರೆಯನ್ನು ಖ್ಯಾತ ಡಿಸೈನರ್ ಸಬ್ಯಸಾಚಿ ವಿನ್ಯಾಸಗೊಳಿಸಿದ್ದಾರೆ.
ಗಾಜಿನ ಮಣಿಗಳು ಮತ್ತು ರತ್ನದ ಕಲ್ಲುಗಳನ್ನು ಬಳಸಿ ಕೈಯಿಂದ ಕಸೂತಿ ಮಾಡಲ್ಪಟ್ಟಿದೆ.
ಗಾರ್ಡನ್ ಆಫ್ ಟೈಮ್ ಥೀಮ್‌ಗೆ ಹೊಂದಿಸಲು ಅವರು ಮೆಟ್ ಗಾಲಾದಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ . ಈ ಸಂದರ್ಭದಲ್ಲಿ ಜನಪ್ರಿಯ ಮ್ಯಾಗಜಿನ್ ವೋಗ್ ಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಸೀರೆಗಿಂತ ಕಾಲಾತೀತವಾದದ್ದು ಯಾವುದೂ ಇಲ್ಲ
ಎಂದು ಹೇಳುವ ಆಲಿಯಾ ಸೀರೆ ಹಾಗೂ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಪ್ರಯತ್ನ ಮಾಡಿದ್ದಾರೆ.
ಆಲಿಯಾ ಈ ನೀಲಿಬಣ್ಣದ ಹಸಿರು ಸೀರೆಯಲ್ಲಿ ಹೊಂದಾಣಿಕೆಯ ಆಭರಣಗಳೊಂದಿಗೆ ಸುಂದರವಾಗಿ ಕಾಣುತ್ತಿದ್ದರು . ಅದರಲ್ಲೂ ಉದ್ದದ ಪಲ್ಲು ಈ ಸೀರೆಯ ವಿಶೇಷ ಆಕರ್ಷಣೆ ಎಂದೇ ಹೇಳಬಹುದು. ಅದು ೨೩ ಅಡಿ ಉದ್ದದ ಸೀರೆಯ ಪಲ್ಲು.ರೆಡ್ ಕಾರ್ಪೆಟ್ ಮೇಲೆ ಕಾಲಿಡುತ್ತಿದ್ದಂತೆ ಎಲ್ಲ ಕ್ಯಾಮರಾ ಕಣ್ಣುಗಳು ಆಲಿಯಾ ಮೇಲೆಯೇ ಇದ್ದವು .
ಈ ಮೆಟ್ ಗಾಲಾಗೆ ಬಂದಿದ್ದವರೆಲ್ಲ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಂಡರೆ, ಆಲಿಯಾ ಈ ಸೀರೆಯಲ್ಲಿ ಕಣ್ಮನ ಸೆಳೆಯುವ ಸೌಂದರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.ಆಕೆಯ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಮೆಟ್ ಗಾಲಾ ೨೦೨೪ ಎಂಬ ಶೀರ್ಷಿಕೆಯೊಂದಿಗೆ ಆಲಿಯಾ ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಅದ್ಭುತ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಆದರೆ ಆಕೆ ಉಟ್ಟ ಈ ಸೀರೆಯ ಹಿಂದೆ ದೊಡ್ಡ ಕಥೆಯೇ ಇದೆ. ಈ ಸೀರೆಯನ್ನು ತಯಾರಿಸಲು ಸಾಕಷ್ಟು ಶ್ರಮ ಪಡಲಾಗಿದೆ. ೧೬೩ ಕುಶಲಕರ್ಮಿಗಳು ೧೯೦೫ ಗಂಟೆಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮೆಟ್ ಗಾಲಾದಲ್ಲಿ ಆಲಿಯಾ ವಿಶೇಷ ಕಾಣಿಸಿಕೊಂಡಿರುವುದರ ಹಿಂದೆ ಎಷ್ಟೋ ಜನರ ಶ್ರಮವಿದೆ. ಅಲಿಯಾಳನ್ನು ಅನಿತಾ ಶ್ರಾಫ್ ಅದಾಜಾನಿಯಾ ಸ್ಟೈಲ್ ಮಾಡಿದ್ದಾರೆ.