ಸನ್ರೈಸರ್ಸ್ ಗೆಲುವಿಗೆ ಅಡ್ಡಿಯಾದ ಸೂರ್ಯ
ಮುಂಬೈ: ಸೂರ್ಯ ಕುಮಾರ್ ಯಾದವ್ ಅವರ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.ಮುಂಬೈ ತಂಡ 17.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.
ಮುಂಬೈ ಪರ ಇಶಾನ್ ಕಿಶನ್ 9, ರೋಹಿತ್ ಶಾರ್ಮಾ 5, ,ನಮನ್ ಧೀರ್ 0, ಸೂರ್ಯ ಕುಮಾರ್ (12 ಬೌಂಡರಿ, 6 ಸಿಕ್ಸರ್, ಅಜೇಯ 102 ರನ್.) ತಿಲಕ್ ವರಮಾ ಅಜೇಯ 37 ರನ್ ಹೊಡೆದರು.
ಸನ್ರೈಸರ್ಸ್ ಪರ ಕಮಿನ್ಸ್, ಭುವನೇಶ್ವರ್ ಮತ್ತು ಜೆನ್ಸ್ ನ್ ತಲಾ 1 ವಿಕೆಟ್ ಪಡೆದರು.
ಇದಕ್ಕೂಮುನ್ನ
ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ಅಮೋಘ ಬೌಲಿಂಗ್ ಪ್ರದರ್ಶನ ನೆರವಿನಿಂದ ಸನ್ರೈಸರ್ಸ್ ತಂಡವನ್ನು 173 ರನ್ಗಳಿಗೆ ಕಟ್ಟಿಹಾಕಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.ಸನ್ರೈಸರ್ಸ್ ಪರ ಟ್ರಾವಿಸ್ ಹೆಡ್ 48, ಅಭಿಷೇಕ್ 11, ಮಯಾಂಕ್ ಅಗರ್ವಾಲ್ 5, ನಿತೀಶ್ 20, ಕ್ಲಾಸೆನ್ 2, ಜಾನ್ಸೆನ್ 17, ಶಹಬಾಜ್ 10, ಪ್ಯಾಟ್ ಕಮಿನ್ಸ್ ಅಜೇಯ 35 ರನ್ ಹೊಡೆದರು. ಮುಂಬೈ ಪರ ಹಾರ್ದಿಕ್ 31ಕ್ಕೆ 3, ಪಿಯೂಶ್ 33ಕ್ಕೆ 3, ಬುಮ್ರಾ 23ಕ್ಕೆ 1, ಅನ್ಶುಲ್ 42ಕ್ಕೆ 1 ವಿಕೆಟ್ ಪಡೆದರು.