ನಟಿಸುವಾಗಲೇ ಶಕುನಿ ಪಾತ್ರಧಾರಿ ನಿಧನ
ಯಲಹಂಕ,ಮೇ.೪-ನಾಟಕ ನಡೆಯುತ್ತಿದ್ದ ವೇಳೆ ಪಾತ್ರಧಾರಿ ಕಲಾವಿದ ವೇದಿಕೆ ಮೇಲೆ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಯಲಹಂಕದ ಸಾತನೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ನಾಟಕದಲ್ಲಿ ಶಕುನಿ ಪಾತ್ರ ನಿರ್ವಹಿಸಿದ್ದ ಎನ್ ಮುನಿಕೆಂಪಣ್ಣ (೭೨) ನಿಧನರಾದ ಕಲಾವಿದರು ಎನ್ನಲಾಗಿದೆ.
ಮಧ್ಯರಾತ್ರಿಯವರೆಗೂ ಉತ್ತಮವಾಗಿ ನಾಟಕ ಪ್ರದರ್ಶಿಸಿದ ಮುನಿಕೆಂಪಣ್ಣ ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ನಿವೃತ್ತ ಉಪನ್ಯಾಸಕರಾಗಿದ್ದ ಎನ್ ಮುನಿಕೆಂಪಣ್ಣ. ದೇವನಹಳ್ಳಿಯಲ್ಲಿ ನಡೆದ ೨೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾವಿಗೂ ಮುನ್ನ ವೇದಿಕೆಯಲ್ಲಿ ಅದ್ಭುತವಾಗಿ ಡೈಲಾಗ್ ಹೇಳಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಇತ್ತೀಚೆಗಷ್ಟೇ ಯಕ್ಷಗಾನದ ಬಳಿಕ ವೇಷ ಕಳಚುವ ಸಂದರ್ಭದಲ್ಲಿ ಗಂಗಾಧರ ಪುತ್ತೂರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಮುನಿಕೆಂಪಣ್ಣ ಅವರ ಹುಟ್ಟೂರು ಅರದೇಶನಹಳ್ಳಿಯಲ್ಲಿ ಇಂದು ಅಂತ್ಯ ಸಂಸ್ಕಾರವನ್ನು ನಡೆಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.