ಕೋಲ್ಕತ್ತಾಕ್ಕೆ ಶರಣಾದ ಮುಂಬೈ
ಮುಂಬೈ: ಮಿಚೆಲ್ ಸ್ಟಾರ್ಕ್ ಅವರ ಸೊಗಸಾದ ಬೌಲಿಂಗ್ ಹಾಗೂ ವೆಂಕಟೇಶ್ ಅಯ್ಯರ್ ಅವರ ಅರ್ಧ ಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಆತಿಥೇಯ ಮುಂಬೈ ವಿರುದ್ಧ 24 ರನ್ಗಳ ಗೆಲುವು ಸಾಧಿಸಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 19.5 ಓವರ್ಗಳಲ್ಲಿ 169 ರನ್ಗಳಿಗೆ ಆಲೌಟ್ ಆಯಿತು.ಮುಂಬೈ 18.5 ಓವರ್ಗಳಲ್ಲಿ 145 ರನ್ಗಳಿಗೆ ಆಲೌಟ್ ಆಯಿತು.
170 ರನ್ಗಳ ಗುರಿ ಬೆನ್ನತ್ತಿದ ಮುಂಬೈ ವೇಗಿ ಸ್ಟಾರ್ಕ್ ದಾಳಿಗೆ ತತ್ತರಿಸಿತು.
ಇಶಾನ್ ಕಿಶನ್ 13, ರೋಹಿತ್ 11, ನಮನ್ ಧೀರ್ 11, ಸೂರ್ಯ ಕುಮಾರ್ 56_ ತಿಲಕ ವರ್ಮಾ 4, ವಾದೇರಾ 6, ಹಾರ್ದಿಕ್ 1, ಟಿಮ್ ಡೇವಿಡ್ 24 ರನ್ ಹೊಡೆದರು.
ಕೋಲ್ಕತ್ತಾ ಪರ ಸ್ಟಾರ್ಕ್ 33ಕ್ಕೆ 4, ವರುಣ್, ಸುನಿಲ್ ಮತ್ತು ರಸ್ಸೆಲ್ ತಲಾ 2 ವಿಕೆಟ್ ಪಡೆದರು.
ಅರ್ಧ ಶತಕ ಹೊಡೆದ ವೆಂಕಟೇಶ್ ಅಯ್ಯರ್
ಇದಕ್ಕೂ ಮುನ್ನ ವೆಂಕಟೇಶ್ ಅಯ್ಯರ್ ಅವರ ಅರ್ಧ ಶತಕದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ವಿರುದ್ಧ 169 ರನ್ ಕಲೆಹಾಕಿತು.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 19.5 ಓವರ್ಗಳಲ್ಲಿ 169 ರನ್ ಕಲೆ ಹಾಕಿತು.
ಆಕ್ರಮಣಕಾರಿ ಆಟ ಪ್ರದರ್ಶಿಸಲು ಹೋದ ಕೋಲ್ಕತ್ತಾಗೆ ಉತ್ತಮ ಆರಂಭ ಸಿಗಲಿಲ್ಲ. ಫಿಲ್ ಸಾಲ್ಟ್ 5, ಸುನಿಲ್ ನರೈನ್ 8 , ರಘುವನ್ಶಿ 13, ನಾಯಕ ಶ್ರೇಯಸ್ ಅಯ್ಯರ್ 6 ರನ್ ಹೊಡೆದರು. ರಿಂಕು ಸಿಂಗ್ 9 ರನ್ ಹೊಡೆದರು.
ಮಧ್ಯಮ ಕ್ರಮಾಂಕದಲ್ಲಿ ಬಂದ ವೆಂಕಟೇಶ್ ಅಯ್ಯರ್ 52 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಹೊಡೆದು ಒಟ್ಟಿ 70 ರನ್ ಗಳಿಸಿದರು. ಮನೀಶ್ ಪಾಂಡೆ31 ಎಸೆತದಲ್ಲಿ 2 ಬೌಂಡರಿ, 2ಸಿಕ್ಸರ್ ಸಹಿತ 42 ರನ್ ಹೊಡೆದರು.
ಆ್ಯಂಡ್ರೆ ರಸೆಲ್ 7, ರಮಣ್ದೀಪ್ 2 ರನ್ ಗಳಿಸಿದರು.
ಮುಂಬೈ ಪರ ನುವಾನ್ ತುಷಾರಾ 42ಕ್ಕೆ 3, ಜಸ್ಪ್ರಿಥ್ ಬುಮ್ರಾ 18ಕ್ಕೆ 3, ಹಾರ್ದಿಕ್ ಪಾಂಡ್ಯ 44ಕ್ಕೆ 2 ವಿಕೆಟ್ ಪಡೆದರು. ಪಿಯೂಷ್ ಚಾವ್ಲಾ 15ಕ್ಕೆ 1 ವಿಕೆಟ್ ಪಡೆದರು.