ಕಾಳಗಿಯಲ್ಲಿ ಕೆಂಡದಂತಹ ಬಿಸಿಲು
ಕಲಬುರಗಿ,ಮೇ.3:ಜಿಲ್ಲೆಯ ಕಾಳಗಿವಲಯದಲ್ಲಿ ಬಿಸಿಲಿನ ಉಗ್ರಪ್ರತಾಪ ಮುಂದುವರೆದಿದೆ.
ಇಂದು ಕಾಳಗಿಯಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.ಯಡ್ರಾಮಿ ತಾಲೂಕಿನ ಇಜೇರಿಯಲ್ಲಿ 45.5,ಚಿಂಚೋಳಿ ತಾಲೂಕಿನ ಐನಾಪುರದಲ್ಲಿ 45.2, ಸೇಡಂ ತಾಲೂಕು ಅಡಕಿಯಲ್ಲಿ 44.9,ಶಹಾಬಾದದಲ್ಲಿ 44.1,ಫರತಾಬಾದ್‍ದಲ್ಲಿ 44.3, ಕಲಬುರಗಿ ಜಿಲ್ಲೆ ಪಟ್ಟಣದಲ್ಲಿ 44.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.