ಪೌರತ್ವ ಪ್ರಕ್ರಿಯೆ ಶೀಘ್ರ ಜಾರಿ
ನವದೆಹಲಿ,ಮೇ೩- ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ತಕ್ಷಣವೇ ರದ್ದು ಮಾಡಲಾಗುವುದು ಎಂದು ವಿರೋಧ ಪಕ್ಷಗಳು ಹೇಳುತ್ತಿರುವ ನಡುವೆಯೇ, ಕಾನೂನಿನ ಅಡಿಯಲ್ಲಿ ಪೌರತ್ವ ನೀಡುವ ಪ್ರಕ್ರಿಯೆ ಈ ತಿಂಗಳಿನಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ
ಪೌರತ್ವ ಪಡೆಯಲು ಈಗಾಗಲೇ ಅರ್ಜಿಗಳು ಬರುತ್ತಿವೆ. ನಿಯಮಗಳ ಪ್ರಕಾರ ಪರಿಶೀಲನೆ ನಡೆಯುತ್ತಿದೆ. ಮತ್ತು ಚುನಾವಣೆಯ ಮೊದಲು, ಪೌರತ್ವ ನೀಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಅವರು ತಿಳಿಸಿದ್ದಾರೆ
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಆಶ್ರಯ ಪಡೆದಿರುವ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಪೌರತ್ವ ನೀಡುವ ಉದ್ದೇಶದಿಂದ ಸಿಎಎ ಜಾರಿ ಮಾಡಲಾಗಿದೆ ಎಂದಿದ್ದಾರೆ.
ಇಂತಹ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್, ಎಡ ಪಕ್ಷಗಳು, ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಹಲವು ಪಕ್ಷಗಳು ಪ್ರತಿಪಾದಿಸುತ್ತಿವೆ ಎಂದು ಹೇಳಿದ್ದಾರೆ.
ಸಿಎಎ ಮೂರು ನೆರೆಯ ಮುಸ್ಲಿಂ ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ ಮತ್ತು ಇದು ಯಾರೊಬ್ಬರ ಪೌರತ್ವ ರದ್ದುಗೊಳಿಸುವುದಿಲ್ಲ ಹೀಗಾಗಿ ಆತಂಕ ಬೇಡ ಎಂದು ಅವರು ತಿಳಿಸಿದ್ದಾರೆ
ಮತದಾನದ ಸಂಖ್ಯೆಯಲ್ಲಿನ ಕುಸಿತ ಬಿಜೆಪಿಗೆ ಹಾನಿಯುಂಟುಮಾಡುತ್ತದೆ ಮತ್ತು ಹಳೆಯ ಮತದಾರರ ಪಟ್ಟಿಗಳನ್ನು ಮತ್ತು “ಸ್ಪರ್ಧೆ” ಕೊರತೆ ಮೊದಲ ಎರಡು ಹಂತಗಳಲ್ಲಿನ ಮತದಾನ ಮೊದಲ ಹಂತದಲ್ಲಿ ಮತದಾನದ ಶೇಕಡಾವಾರು ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ ಎಂಬ ವಾದವನ್ನು ಅಮಿತ್ ಶಾ ತಳ್ಳಿಹಾಕಿದ್ದಾರೆ
ಕೇಜ್ರಿವಾಲ್ ಬಂಧನ ಸಮರ್ಥನೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿರುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.
ಸಮನ್ಸ್‌ಗೆ ಉತ್ತರಿಸಲು ಇಬ್ಬರೂ ಪದೇ ಪದೇ ನಿರಾಕರಿಸಿದ್ದಾರೆ “ಹಲವು ಬಾರಿ ಸಮನ್ಸ್ ನೀಡಿದ ನಂತರ ಅವರು ಹಾಜರಾಗಲಿಲ್ಲ, ಮೊದಲ ಸಮನ್ಸ್ ನಂತರ ಅವರು ಹಾಜರಾಗಿದ್ದರೆ, ಚುನಾವಣೆಗೆ ಆರು ತಿಂಗಳ ಮೊದಲು ಅವರನ್ನು ಬಂಧಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.