ಎಸ್‌ಆರ್‌ಹೆಚ್ ಗೆ ಒಂದು ರನ್ ರೋಚಕ ಜಯ
ಹೈದ್ರಾಬಾದ್: ಭುವನೇಶ್ವರ್ ಕುಮಾರ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಎಸ್‌ಆರ್‌ಹೆಚ್ ರಾಜಸ್ಥಾನ ರಾಯಲ್ಸ್ ವಿರುದ್ಧ 1 ರನ್ ರೋಚಕ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಹೆಚ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ.
ರಾಜಸ್ಥಾನ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 200 ರನ್ ಕಲೆ ಹಾಕಿತು.
202 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 67, ಜೋಸ್ ಬಟ್ಲರ್ 0, ಸಂಜು ಸ್ಯಾಮ್ಸನ್ ೦ ಭುವನೇಶ್ವರ್ಗೆ ಬಲಿಯಾದರು.
ರಿಯಾನ್ ಪರಾಗ್ 77, ಶಿಮ್ರಾನ್ ಹೇಟ್ಮಯರ್ 13 ರನ್, ಧ್ರುವ್ ಜುರೆಲ್ 1, ಅಶ್ವಿನ್ ಅಜೇಯ 2 ರನ್ ಗಳಿಸಿದರು.ಕೊನೆಯವರೆಗೂ ಹೋರಾಡಿದ ರೊವಮನ್ ಪೊವೆಲ್ 27 ರನ್ ಹೊಡೆದು ಕೊನೆಯ ಎಸತದಲ್ಲಿ ಭುವನೇಶ್ವರ್ಗೆ ಬಲಿಯಾದರು. ರಾಜಸ್ಥಾನ ವೀರೋಚಿತ ಸೋಲು ಅನುಭಿಸಿತು.
ಸನ್ ರೈಸರ್ಸ ಪರ ಭುವನೇಶ್ವರ್ 41ಕ್ಕೆ 3,ಕಮಿನ್ಸ್ , ನಟರಾಜನ್ ತಲಾ 1 ವಿಕೆಟ್ ಪಡೆದರು.
ಐದನೆ ಬಾರಿ 200 ರನ್ ಹೊಡೆದ ಎಸ್‌ಆರ್‌ಹೆಚ್
ಇದಕ್ಕೂ ಮುನ್ನ ನಿತೀಶ್ ರೆಡ್ಡಿ ಹಾಗೂ ಟ್ರಾವಿಸ್ ಹೆಡ್ ಅವರ ಅರ್ಧ ಶತಕಗಳ ನೆರವಿನಿಂದ ಆತಿಥೇಯ ಎಸ್‌ಆರ್‌ಹೆಚ್ ತಂಡ 202 ರನ್ಗಳ ಸವಾಲು ನೀಡಿದೆ. ಟೂರ್ನಿಯಲ್ಲಿ ಐದನೆ ಬಾರಿಗೆ ಎಸ್‌ಆರ್‌ಹೆಚ್ 200ಕ್ಕಿಂತ ಹೆಚ್ಚು ರನ್ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಓಪನರ್ ಟ್ರಾವಿಸ್ ಹೆಡ್ ಮತ್ತೊಮ್ಮೆ ರನ್ ಮಳೆ ಸುರಿಸಿದರು. 44 ಎಸೆತಗಳಲ್ಲಿ 58 ರನ್ ಹೊಡೆದರು. ಟೂರ್ನಿಯಲ್ಲಿ ನಾಲ್ಕನೆ ಅರ್ಧ ಶತಕ ಸಿಡಿಸಿದರು.
ಇನ್ನು ನಿತೀಶ್ 42 ಎಸೆತಗಳಲ್ಲಿ ಅಜೇಯ 76 ರನ್ ಹೊಡೆದರು. ಎರಡನೆ ಅರ್ಧ ಶತಕ ಹೊಡೆದರು. ನಿತೀಶ್ ಮತ್ತು ಹೆನ್ರಿಕ್ ಕ್ಲಾಸೆನ್ 42 ಎಸೆತಗಳಲ್ಲಿ ಅಜೇಯ 76 ರನ್ ಹೊಡೆದರು. ಓಪನರ್ ಹೆಡ್ ನೀಡದ ಕ್ಯಾಚ್ ಅನ್ನ ರಿಯಾನ್ ಪರಾಗ್ ಕೈಚೆಲ್ಲಿದರು. ಜೀವದಾನ ಪಡೆದ ಹೆಡ್ 6 ಬೌಂಡರಿ ಮತ್ತು 3 ಸಿಕ್ಸರ್ ಚಚ್ಚಿದರು. ನಿತೀಶ್ 8 ಸಿಕ್ಸರ್ 3 ಬೌಂಡರಿ ಹೊಡೆದರು.
300ನೇ ಐಪಿಎಲ್ ಪಂದ್ಯ ಆಡಿದ ಯಜ್ವಿಂದರ್ ಚಾಹಲ್ 4 ಓವರ್ ಗಳಿಂದ ಒಂದೂ ವಿಕೆಟ್ ಪಡೆಯದೇ 62 ರನ್ ಕೊಟ್ಟರು. ಆವೇಶ್ ಖಾನ್ 2, ಸಂದೀಪ್ 1 ವಿಕೆಟ್ ಪಡೆದರು.