ಕಾಳಗಿಯಲ್ಲಿ 46.1 ಡಿಸೆ ಉಷ್ಣಾಂಶ
ಕಲಬುರಗಿ,ಮೇ 2: ಜಿಲ್ಲೆಯ ಕಾಳಗಿ ಹೋಬಳಿಯಲ್ಲಿ ಇಂದು 46.1 ಡಿಸೆ ಉಷ್ಣಾಂಶ ದಾಖಲಾಗಿದೆ.ಕಲಬುರಗಿಯು ಬೆಂಕಿಯ ಕುಲುಮೆಯಂತಾಗಿದ್ದು ಜನ ಬಿಸಿಲಿನ ಝಳಕ್ಕೆ ಬಸವಳಿದು ಹೋಗಿದ್ದಾರೆ.ಉಗ್ರ ಬಿಸಿಲಿನ ಜೊತೆ ಬಿಸಿ ಗಾಳಿಯ ಹೊಡೆತಕ್ಕೆ ಸಿಕ್ಕು ಯಾವಾಗ ಈ ಬೇಸಿಗೆ ಮುಗಿದೀತು ? ಎಂದು ಪರಿತಪಿಸುವಂತಾಗಿದೆ.
ಇಂದು ಕಲಬುರಗಿ ನಗರದಲ್ಲಿ 42.4,ಜೇವರಗಿ 43.5,ಯಡ್ರಾಮಿ 43.1,ಸುಲೇಪೇಟೆಯಲ್ಲಿ 44.8.ಚಿಂಚೋಳಿ ತಾಲೂಕಿನ ಐನಾಪುರ 45.1,ಅಫಜಲಪುರದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.