ಶ್ರೀಲಂಕಾ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ
ಕೊಲೊಂಬೋ,ಸೆ.೨೧-ಶ್ರೀಲಂಕಾದಲ್ಲಿ ೨೦೨೨ರಲ್ಲಿ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಸಾಮೂಹಿಕ ಪ್ರತಿಭಟನೆಯಿಂದ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಿದ ನಂತರ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ ನಡೆದಿದೆ.
ಮತದಾನ ಮುಗಿದ ಬಳಿಕ ಇಂದು ಸಂಜೆಯಿಂದಲೇ ಮತ ಎಣಿಕೆ ಆರಂಭವಾಗಲಿದ್ದು ನಾಳೆ ವೇಳೆಗೆ ಶ್ರೀಲಂಕಾದ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದು ಬಹಿರಂಗವಾಗಲಿದೆ
ಶ್ರೀಲಂಕಾದ ಆರ್ಥಿಕ ಕುಸಿತದಿಂದ ಹೊರತರುವ ಗುರುತರ ಕಾರ್ಯದ ಹೊಣೆ ಹೊತ್ತಿರುವ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮತ್ತೊಂದು ಅವಧಿಗೆ ಆಯ್ಕೆಯಾಗಲು ಪ್ರಯತ್ನಿಸುತ್ತಿದ್ದಾರೆ.
ದ್ವೀಪರಾಷ್ಟ್ರದ ಆರ್ಥಿಕ ಸುಧಾರಣೆಗಳ ಮೇಲೆ ಜನಾಭಿಪ್ರಾಯ ಸಂಗ್ರಹವಾಗಿದ್ದು ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿಗಳು ಮತ್ತು ಕಲ್ಯಾಣಕ್ಕೆ ಕಡಿತದ ಕಾರಣದಿಂದಾಗಿ ಅನೇಕರು ಇನ್ನೂ ತಮ್ಮ ಜೀವನ ಪೂರೈಸಲು ಹೆಣಗಾಡುತ್ತಿದ್ದಾರೆ.
“ದೇಶ ಎದುರಿಸುತ್ತಿರುವ ಹಣದುಬ್ಬರ, ಗಗನಕ್ಕೇರುತ್ತಿರುವ ಜೀವನ ವೆಚ್ಚ ಮತ್ತು ಬಡತನ ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ಜೀವನೋಪಾಯವನ್ನು ಸುಧಾರಿಸಲು ಪರಿಹಾರಕ್ಕಾಗಿ ಮತದಾರರು ಸೂಕ್ತ ಅಭ್ಯರ್ಥಿಗೆ ಮತಚಲಾಯಿಸುವ ಸಾಧ್ಯತೆ ಇದೆ
ಭಾರತ ಮೂಲದ ಥಿಂಕ್ ಟ್ಯಾಂಕ್ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಸಹವರ್ತಿ ಸೌಮ್ಯ ಭೌಮಿಕ್ ತಿಳಿಸಿದ್ದಾರೆ
“ದೇಶ ತನ್ನ ಆರ್ಥಿಕ ಕುಸಿತದಿಂದ ಹೊರಬರಲು ಹೆಣಗಾಡುತ್ತಿರುವ ನಡುವೆ ಶ್ರೀಲಂಕಾದ ಚೇತರಿಕೆಯ ಪಥವನ್ನು ರೂಪಿಸಲು ಮತ್ತು ಅದರ ಆಡಳಿತದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಶ್ವಾಸ ಹೆಚ್ಚಿಸಲು ಈ ಚುನಾವಣೆ ನಿರ್ಣಾಯಕ ಪಾತ್ರ ವಹಿಸಿದೆ ಎನ್ನಲಾಗಿದೆ
ಅಧಿಕಾರ ವಹಿಸಿಕೊಂಡ ಸ್ವಲ್ಪ ಸಮಯದ ನಂತರ, ವಿಕ್ರಮಸಿಂಘೆ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದರು. ಜೊತೆಗೆ ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿಯನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ವಿಶ್ವಾಸದಲ್ಲಿದ್ದಾರೆ.
ಶ್ರೀಲಂಕಾದ ಮತದಾರರ ಚಿತ್ತ ಯಾರ ಕಡೆಗೆ ಇದೆ ಎನ್ನುವುದು ನಾಳೆ ವೇಳೆಗೆ ಸ್ಪಷ್ಟವಾಗಲಿದೆ.