ಬಿಬಿಎಂಪಿ ಮೈದಾನದ ಗೇಟ್ ತಲೆ ಬಿದ್ದು ಬಾಲಕ ದುರ್ಮರಣ
ಬೆಂಗಳೂರು: ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾಗಿರುವ ಘಟನೆ ಮಲ್ಲೇಶ್ವರಂನ ಬಿಬಿಎಂಪಿಯ ಚಿತ್ರನಟ ದಿ.ರಾಜಶಂಕರ್ ಆಟದ ಮೈದಾನದಲ್ಲಿ ಭಾನುವಾರ ಸಂಜೆ
ನಡೆದಿದೆ.
ಮಲ್ಲೇಶ್ವರಂ ಫೈಪ್‌ಲೈನ್‌ನಲ್ಲಿ ವಾಸವಾಗಿದ್ದ ಆಟೋ ಚಾಲಕ ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮೊದಲನೇ ಪುತ್ರ ಮಲ್ಲೇಶ್ವರಂನ ಬಿಬಿಎಂಪಿ ಶಾಲೆಯಲ್ಲಿ ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ
ನಿರಂಜನ್ (10) ಮೃತ ಬಾಲಕನಾಗಿದ್ದಾನೆ.
ದಿ.ರಾಜಶಂಕರ್ ಆಟದ ಮೈದಾನದಲ್ಲಿ ಸಂಜೆ 4ರ ವೇಳೆ ಆಟ ಆಡಲು ನಿರಂಜನ್ ಮೈದಾನಕ್ಕೆ ಬಂದಿದ್ದ ವೇಳೆ ಬಾಲಕ ಗೇಟ್ ಬಳಿಯೇ ನಿಂತಿದ್ದು,ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ.
ಕೂಡಲೇ ಸ್ಥಳೀಯರು ಮಗುವನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, ‘ನಾವು ಇಲ್ಲಿ ಕ್ರಿಕೆಟ್ ಆಡುತ್ತಿದ್ದೇವೋ, ಆಗ ಸೈಕಲ್ ಜೊತೆಗೆ ಮೃತ ಬಾಲಕ ಗ್ರೌಂಡ್ಗೆ ಬಂದು ಗೇಟ್ ತಗೆಯುತ್ತಿದ್ದಂತೆ ಆ ಹುಡುನ ಮೇಲೆ ಗೇಟ್ ಬಿತ್ತು. ನಾವು ಗೇಟ್ ಮೇಲಕ್ಕೆ ಎತ್ತಿದೇವು. ಆ ಮೇಲೆ ಎಳನೀರು ಅಂಗಡಿ ಅವರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಈ ವೇಳೆ ಹುಡುಗನಿಗೆ ತಲೆ ಮತ್ತು ಕಿವಿಗೆ ಗಾಯವಾಗಿತ್ತು ಎಂದಿದ್ದಾರೆ.