ಬಾವುಟ ಹರಿದು ಹಾರಾಡುತ್ತಿದ್ದರೂ ಕೇಳುವವರಿಲ್ಲ…
ಮುದಗಲ್ಲ :- ಬಾವುಟ ಹಾರಿಸಿದಾಗ ತಲೆಕೆಳಗಾಗಿರುವುದು, ವರ್ಷಾನುಗಟ್ಟಲೆ ಕಂಬದ ಮೇಲೆ ಕೆಟ್ಟಕೊಳಕಾಗಿ ಬಾವುಟ ಹಾರಾಡುತ್ತಿರುವುದು ಮುಂತಾದ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಕೆಲವು ಅಚಾತುರ್ಯದಿಂದಾಗಿರಬಹುದು, ಕೆಲವು ಆಲಸ್ಯತನದಿಂದ ಆಗಿರಬಹುದು.
ಮುದಗಲ್ಲ ನ ರಂಗಮಂದಿರದಲ್ಲಿ ಪಕ್ಕದಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದು ಬಾವುಟ ಹಾರಿಸಿದ್ದು ಮಳೆ, ಗಾಳಿ, ಬಿಸಿಲಿಗೆ ತೊಯ್ದು, ಹರಿದು, ಒಣಗಿ ಹಾರಾಡುತ್ತಿದ್ದರೆ ಹೇಗಿರುತ್ತದೆ? ಹೀಗಾಗಿದ್ದರೂ ಅವನ್ನು ಬದಲಿಸುವವರಿರಲಿಲ್ಲ, ಕೇಳುವವರಂತೂ ಇರಲೇಯಿಲ್ಲ.
ಸಲಾಕೆಯ ತುದಿಗೆ ಕನ್ನಡ ಧ್ವಜ ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಇಷ್ಟಾದ ಮೇಲೆ ಧ್ವಜಕ್ಕೆ ಏನಾಗಿದೆಯೆಂದು ನೋಡುವವರೂ ಇರಲಿಲ್ಲ, ಕೇಳುವವರೂ ಇರಲಿಲ್ಲ.
ಅನೇಕ ಗಡಿನಾಡುಗಳನ್ನು ನಾವು ಈಗಾಗಲೆ ಪರರಾಜ್ಯಗಳಿಗೆ ದಾನವಾಗಿ ನೀಡಿಬಿಟ್ಟಿದ್ದೇವೆ. ಉಳಿದ ಗಡಿನಾಡುಗಳಲ್ಲಿ ಕನ್ನಡಕ್ಕಿಂತ ಪರಭಾಷೆಗಳ ಪ್ರಾಬಲ್ಯವೇ ಎದ್ದುಕಾಣುತ್ತಿದೆ. ಅದಷ್ಟು ಬೇಗನೆ ಇದಕ್ಕೆ ಸಂಬಂದಿಸಿದ ಮುದಗಲ್ಲ ಕರವೇ ಅಧ್ಯಕ್ಷರು ಗಮನಹರಿಸಬೇಕು ಎಂದು ಸಾವ೯ಜನಿಕರ ವಲಯದಲ್ಲಿ ಚಚೆ೯ ಗ್ರಾಸವಾಗಿದೆ…