ಜಾಹಿರಾತಿನಲ್ಲಿ ಹೃತಿಕ್- ಕತ್ರಿನಾ
ಮುಂಬೈ,ಸೆ.೨೧-ನಟರಾದ ಹೃತಿಕ್ ರೋಷನ್ ಮತ್ತು ನಟಿ ಕತ್ರಿನಾ ಕೈಫ್ ಹೊಸ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಪೋಸ್ಟ್ ಹಂಚಿಕೊಂಡಿದೆ. ಫೋಟೋದಲ್ಲಿ, ಹೃತಿಕ್ ರೋಷನ್ ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ ಅವರು ಕತ್ರಿನಾ ಕಡೆಗೆ ನೋಡುತ್ತಿದ್ದರುವ ಚಿತ್ರವಿದೆ. ಸುರಸುಂದರಾಂಗಿ ಕತ್ರೀನಾ ಕೆಂಪು ಡ್ರೆಸ್ ಧರಿಸಿದ್ದಾಳೆ. ನಟನ ಭುಜದ ಮೇಲೆ ಕೈಯಿಟ್ಟು ಮುಗುಳ್ನಗುತ್ತಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವ ದೃಶ್ಯವಿದೆ. ಈ ದೃಶ್ಯ ತುಂಬಾ ಮನಮೋಹಕವಾಗಿ ಮೂಡಿ ಬಂದಿದೆ.
ಕತ್ರಿನಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಮರುಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ಅವರನ್ನು ಮತ್ತೆ ನೋಡಲು ಬಯಸುವುದಾಗಿ ಪೋಸ್ಟ್ ಮಾಡಿದ್ದಾರೆ.ಆದರೆ ಎರಡು ಚಿತ್ರಗಳ ನಂತರ ಅವರು ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ.ಅವರ ಹೊಸ ಫೋಟೋ ಖಂಡಿತವಾಗಿಯೂ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದೆ.ಸ್ವಿಸ್ ವಾಚ್‌ಮೇಕರ್ ರಾಡೋ, ಎರಡು ಹೊಸ ವಾಚಗಳನ್ನು ಉಡುಗೊರೆ-ನೀಡಲು, ಪರಿಚಯಿಸಿದೆ.ರಾಡೋ ಕ್ಯಾಪ್ಟನ್ ಕುಕ್ ಹೈಟೆಕ್ ಸೆರಾಮಿಕ್ ಸ್ಕೆಲಿಟನ್ ಮತ್ತು ರಾಡೋ ಸೆಂಟ್ರಿಕ್ಸ್ ಓಪನ್ ಹಾರ್ಟ್ ಸೂಪರ್ ಜುಬಿಲೆ ಈ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ.ಅಭಿಮಾನಿಗಳು ಅತ್ಯುತ್ತಮ ತೆರೆಯ ಜೋಡಿ ಇಬ್ಬರು ತೆರೆಯ ಮೇಲೆ ಒಟ್ಟಾಗಿ ನಟಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೃತಿಕ್ ಮತ್ತು ಕತ್ರಿನಾ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ, ಜೋಯಾ ಅಖ್ತರ್ ಅವರ ಜಿಂದಗಿ ನಾ ಮಿಲೇಗಿ ದೊಬಾರಾ (೨೦೧೧) ಮತ್ತು ಸಿದ್ಧಾರ್ಥ್ ಆನಂದ್ ಅವರ ಬ್ಯಾಂಗ್ ಬ್ಯಾಂಗ್ (೨೦೧೪). ಕತ್ರಿನಾ ಅಗ್ನಿಪಥ್ (೨೦೧೨) ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದಾರೆ. ಟೈಗರ್ ೩ (೨೦೨೩) ನಲ್ಲಿ ಹೃತಿಕ್ ಕೇವಲ ಅತಿಥಿ ಪಾತ್ರವನ್ನು ಮಾಡಿದ್ದಾರೆ.