ಮಣಿಪುರ ಸಚಿವ ಆಪ್ತಸಹಾಯಕನ ಅಪಹರಣ
ಇಂಫಾಲ್.ಸೆ.೨೧- ಮಣಿಪುರದ ಸಚಿವ ನಿವಾಸದೆದುರೇ ಆಪ್ತಸಹಾಯಕನನ್ನ ದುಷ್ಕರ್ಮಿಗಳು ಅಪಹರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎಗೆ) ವಹಿಸಲಾಗಿದೆ.
ಮಣಿಪುರದ ಗ್ರಾಹಕ ವ್ಯವಹಾರಗಳ ಸಚಿವ ಎಲ್.ಸುಸಿಂದ್ರೋ ಅವರ ಆಪ್ತಸಹಾಯಕ ಎಸ್. ಸೊಮೊರೆಂಡ್ರೊ (೪೩ ವರ್ಷ) ಅಪಹರಣವಾಗಿರುವ ವ್ಯಕ್ತಿಯಾಗಿದ್ದಾರೆ.
ಆಪ್ತಸಹಾಯಕನನ್ನ ಅಪಹರಿಸಲು ಕಾರಣವೇನು ಎಂಬು ಅಸ್ಪಷ್ಟವಾಗಿದೆ. ಘಟನೆಯ ಬಗ್ಗೆ ಯಾವು ಗುಂಪು ಕೂಡ ಹೊಣೆಹೊತ್ತಿಲ್ಲ. ದುಷ್ಕರ್ಮಿಗಳನ್ನ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.
ಈ ಘಟನೆಗೂ ಮುನ್ನ ಹಿಂದಿನ ದಿನ ಬಿಷ್ಣಪುರ ಜಿಲ್ಲೆಯ ಮಾಜಿ ಮುಖ್ಯ ಕಾರ್ಯದರ್ಶಿ ಓಯಿನಮ್ ನಬಕಿಶೋರ್ ಅವರ ಮನೆ ಮೇಲೂ ಶಸ್ತ್ರಸಜ್ಜಿತ ದಾಳಿಕೋರರು ಕನಿಷ್ಟ ೫ ಸುತ್ತು ಗುಂಡು ಹಾರಿಸಿದ ಘಟನೆ ನಡೆದಿದೆ.
೨೦೨೩ರ ಮೇ ತಿಂಗಳಿನಲ್ಲಿ ಮೈತೆ-ಕುಕಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದರಿಂದ ಬಿಜೆಪಿ ವಕ್ತಾರ ಟಿ. ಮೈಕಲ್ ಲಮ್‌ಜತಾಂಗ್ ಮನೆ ಮೇಲೆ ೩ನೇ ಬಾರಿಗೆ ದಾಳಿ ನಡೆದಿದೆ.