೨೦ ವರ್ಷಗಳಲ್ಲಿ ೧೧೫ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ
ಮುಂಬೈ.ಮೇ೨:೨೦೦೫ ಮತ್ತು ೨೦೨೪ ರ ನಡುವೆ, ಐಐಟಿ ಮದ್ರಾಸ್‌ನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.೨೬, ಕಾನ್ಪುರದ ಐಐಟಿ ೧೮, ಖರಗ್‌ಪುರದಲ್ಲಿ ಐಐಟಿ ೧೩ ಮತ್ತು ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ಕನಿಷ್ಠ ೧೧೫ ವಿದ್ಯಾರ್ಥಿಗಳು ೨೦೦೫ ರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್ ಅವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯಿಂದ ಈ ವಿಷಯ ಬಹಿರಂಗಗೊಂಡಿದೆ .
ಇವುಗಳಲ್ಲಿ ೯೮ ಸಾವುಗಳು ಕ್ಯಾಂಪಸ್‌ನಲ್ಲಿ ಸಂಭವಿಸಿದ್ದು ೫೬ ನೇಣು ಬಿಗಿದ ಸಾವುಗಳು ಸೇರಿದಂತೆ, ೧೭ ಕ್ಯಾಂಪಸ್‌ನಿಂದ ಹೊರಗಡೆ ಸಂಭವಿಸಿವೆ.ಕಳೆದ ಫೆ.೧೨, ೨೦೨೩ ರಂದು ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಸಾವನ್ನಪ್ಪಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ದೇಶಾದ್ಯಂತ ಐಐಟಿಯನ್ನರ ಸಾವಿನ ನಂತರ ಮಾಹಿತಿ ಕೋರಿ ಆರ್‌ಟಿಐ ಅರ್ಜಿಯನ್ನು ಸಲ್ಲಿಸಲು ಸಿಂಗ್ ಮುಂದಾಗಿದ್ದರು.
ಅಂಕಿ ಅಂಶಗಳ ಪ್ರಕಾರ, ೨೦೦೫ ಮತ್ತು ೨೦೨೪ ರ ನಡುವೆ, ಐಐಟಿ ಮದ್ರಾಸ್‌ನಲ್ಲಿ ಅತಿ ಹೆಚ್ಚು ಸಾವುಗಳಾಗಿದ್ದು. ೨೬, ನಂತರ ಐಐಟಿ ಕಾನ್ಪುರದಲ್ಲಿ ೧೮, ಐಐಟಿ ಖರಗ್‌ಪುರದಲ್ಲಿ ೧೩ ಮತ್ತು ಐಐಟಿ ಬಾಂಬೆಯಲ್ಲಿ ೧೦ ಸಾವುಗಳು ದಾಖಲಾಗಿವೆ. ಈ ವರ್ಷ ಇದುವರೆಗೆ ಐದು ಸಾವುಗಳು ದಾಖಲಾಗಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆಯು ಆರಂಭದಲ್ಲಿ ಸಿಂಗ್ ಅವರ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಪ್ರತ್ಯೇಕ ಸಂಸ್ಥೆಗಳಿಗೆ ಪ್ರತ್ಯೇಕ ಆರ್‌ಟಿಐಗಳನ್ನು ಸಲ್ಲಿಸುವಂತೆ ಹೇಳಿತ್ತು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಆದರೆ “ಮನವಿಯ ನಂತರ, ಸಚಿವಾಲಯವು ಎಲ್ಲಾ ಐಐಟಿಗಳಿಗೆ ಡೇಟಾವನ್ನು ಮಾಹಿತಿ ಹಕ್ಕಿನಡಿ ಹಂಚಿಕೊಳ್ಳಲು ಸೂಚಿಸಿತು.”
೮ ತಿಂಗಳುಗಳಲ್ಲಿ, ೨೩ ಐಐಟಿಗಳಲ್ಲಿ ೧೩ ಮಾತ್ರ ಸಿಂಗ್ ಅವರೊಂದಿಗೆ ವಿದ್ಯಾರ್ಥಿಗಳ ಮರಣ ಕುರಿತ ಮಾಹಿತಿಯನ್ನು ಹಂಚಿಕೊಂಡಿವೆ “ನಾನು ಸಾರ್ವಜನಿಕ ಡೊಮೇನ್‌ನಲ್ಲಿರುವ ಅಧಿಕೃತ ಮೂಲಗಳಿಂದ ಡೇಟಾವನ್ನು ಸಂಗ್ರಹಿಸಿದ್ದೇನೆ, ಇದರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಅಂಕಿಅಂಶಗಳು ಮತ್ತು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಸೇರಿವೆ ಎಂದು ಸಿಂಗ್ ತಿಳಿಸಿದ್ದಾರೆ.
ಕಳೆದ ವರ್ಷದಲ್ಲಿ ಐಐಟಿ ವಿದ್ಯಾರ್ಥಿಗಳು ಉನ್ನತ ಮಟ್ಟದ ಆತ್ಮಹತ್ಯೆ ಮಾಡಿಕೊಂಡಿರುವುದು ಮುಖ್ಯಾಂಶಗಳು ಮತ್ತು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ. ಐಐಟಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡ ನಿರ್ವಹಣೆ ಗಂಭೀರ ಕ್ರಮಗಳಿಗೆ ಕರೆ ನೀಡಿರುವ ಸಿಂಗ್, “ದೇಶದ ಪ್ರಮುಖ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಬಹಿರಂಗ ಪಡಿಸುವುದೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ ಹಾಗೂ “ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಪೋಷಕರಿಗೆ ಕಡಿಮೆ ಒತ್ತಡ ನಿವಾರಣೆಗೆ ಧಾರಿಸುವ ತುರ್ತು ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.