ಪುಷ್ಪಾ ೨ ಸಾಂಗೆ ಫ್ಯಾನ್ಸ್ ಫುಲ್ ಫಿದಾ
ಹೈದ್ರಾಬಾದ್.ಏ.೨- ಬಹುನಿರೀಕ್ಷಿತಾ ಪುಷ್ಪ ೨ ಚಿತ್ರದ ಮೊದಲ ಕಾರ್ಮಿಕರ ದಿನಾಚರಣೆಯಂದು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಡ್ಡಿಂಗ್‌ನಲ್ಲಿದೆ.
ಇದಕ್ಕೂ ಮುನ್ನ ಟೀಸರ್ ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ತೆಲಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಸೇರಿ
೬ ಭಾಷೆಗಳಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.
ಕಾರ್ಮಿಕರ ದಿನಾಚರಣೆಗೂ ಪುಷ್೨ ರಿಲೀಸ್ ಮಾಡಿರುವ ಹಾಡಿಗೂ ನಂಟಿದೆ. ಚಿತ್ರದಲ್ಲಿ ಸಾಮಾನ್ಯ ಕಾರ್ಮಿಕನಾಗಿರುವ ಪುಷ್ಪರಾಜ್
ಶ್ರೀಮಂತನಾಗಿದ್ದು ಹೇಗೆ ಅನ್ನೋದನ್ನ ಒಂದು ಹಾಡಿನ ಮೂಲಕ ತೋರಿಸಲಾಗಿದೆ.
ಈ ಹಾಡಿಗೆ ಒಂದೇ ಲಕ್ಷಾಂತರ ಮಂದಿಯಿಂದ ವೀಕ್ಷಣೆಯಾಗಿದೆ.
ಪುಷ್ಪ ಪುಷ್ಪ ಸಾಲುಗಳಿಗೆ ಚಂದ್ರ ಬೋಸ್ ಹಾಡು ಬರೆದಿದ್ದಾರೆ. ದೇವಿಶ್ರೀ ಪ್ರಸಾದ್ ಪುಷ್ಪ ಪುಷ್ಪ ಸಾಲುಗಳಿಗೆ ಸಂಗೀತ ನೀಡಿದ್ದಾರೆ.
ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ.
ಕನ್ನಡದಲ್ಲಿ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ.
ಹಾಡಿಗೆ ಅಲ್ಲು ಅರ್ಜುನ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ತಗ್ಗೋದೇ ಇಲ್ಲ ಎನ್ನುವ ಡೈಲಾಗ್‌ಗೆ ಸಖತ್ ರೆಸ್ಪಾನ್ಸ್ ಬಂದಿದೆ, ಮೈತ್ರಿ ಮೂವಿ ಮೇಕರ್ಸ್
ದುಬಾರಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿದೆ.
ನಟ ಅಲ್ಲು ಅರ್ಜುನ್ ಜತೆಯಾಗಿ ಶ್ರೀವಲ್ಲಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಡಾಲಿ ಧನಂಜಂii, ಫಹಾದ್ ಫಾಸಿಲ್ ಚಿತ್ರದಲ್ಲಿ ಇದ್ದಾರೆ.
ಈ ಚಿತ್ರ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಆ.೧೫ ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.