ತವರಿನಲ್ಲಿ ಪಂಜಾಬ್ ಗೆ ಶರಣಾದ ಚೆನ್ನೈ
ಚೆನ್ನೈ : ಸಂಘಟಿತ ಪ್ರದರ್ಶನ ನೀಡಿದ ಪಂಜಾಬ್ ಆತಿಥೇಯ ಚೆನ್ನೈ ವಿರುದ್ಧ 7 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಚೆನ್ನೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಪಂಜಾಬ್ 17.5 ,ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು.
163 ರನ್ ಗುರಿ ಬೆನ್ನತ್ತಿದ ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ 13, ಜಾನಿ ಬೇರ್ಸ್ಟೊ 46, ರೂಸೌ 13, ಶಶಾಂಕ್ ಅಜೇಯ 25, ನಾಯಕ ಕರ್ರನ್ ಅಜೇಯ 26 ರನ್ ಗಳಿಸಿದರು.
ಶಾರ್ದೂಲ್ 48ಕ್ಕೆ1, ಗ್ಲೀಸನ್ 30ಕ್ಕೆ 1 ವಿಕೆಟ್, ದುಬೆ 14ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಚೆನ್ನೈ ಪರ ಅಜಿಂಕ್ಯ ರಹಾನೆ ಮತ್ತು ನಾಯಕ ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ಗೆ 64 ರನ್ ಸೇರಿಸಿದರು. ರಹಾನೆ (29ರನ್) ಹರಪ್ರೀತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು. ಮೂರನೆ ಕ್ರಮಾಂಕದಲ್ಲಿ ಬಂದ ಶಿವಂ ದುಬೆ (0) ರವೀಂದ್ರ ಜಡೇಜಾ (2ರನ್) ಬೇಗನೆ ಪೆವಿಲಿಯನ್ ಸೇರಿದರು. ನಾಯಕನ ಜತೆಗೂಡಿದ ಸಮೀರ್ 37 ರನ್ಗಳ ಜತೆಯಾಟ ನೀಡಿದರು. ತುರಾಜ್ ಗಾಯಕ್ವಾಡ್ 44 ಎಸೆತದಲ್ಲಿ ಅರ್ಧ ಶತಕ ಹೊಡೆದು ಹರಪ್ರೀತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದರು.
ಸಮೀರ್ ರಿಜ್ವಿ 21, ಮೊಯಿನ್ ಅಲಿ 15, ನಿ 14 ಡ್ಯಾರಿಲ್ ಮಿಚೆಲ್ ಅಜೇಯ 1 ರನ್ ಗಳಿಸಿದರು.
ಪಂಜಾಬ್ ಪರ ಹರಪ್ರೀತ್ ಬ್ರಾರ್ 17ಕ್ಕೆ 2, ರಾಹುಲ್ ಚಾಹರ್ 16ಕ್ಕೆ 2, ರಬಾಡ 23ಕ್ಕೆ 1, ಅರ್ಷದೀಪ್ 52ಕ್ಕೆ 1 ವಿಕೆಟ್ ಪಡೆದರು.