ಡೀಪ್ ಫೇಕ್: ರಶ್ಮಿಕಾ ಹೇಳಿಕೆ ದಾಖಲು
ನವದೆಹಲಿ.ಮೇ. ೧- ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ನಟಿ ರಶ್ಮಿಕಾ ಮಂದಣ್ಣ ದೆಹಲಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಕೆಲವು ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಕಷ್ಟು ವಿವಾದ ಸೃಷ್ಟಿಸಿತ್ತು.
ಬಾಲಿವುಡ್‌ನ ದಿಗ್ಗಜ ಅಮಿತಾಭ್ ಬಚ್ಚನ್ ಸಾಕಷ್ಟು ತಾರಾ ನಟ,ನಟಿಯರು ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
ಕ್ರಮಕ್ಕೆ ಮುಂದಾಗಿದ್ದವು. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಡೀಪ್ ಫೇಕ್ ವಿಡಿಯೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ತೀವ್ರ ಅಸಮಾಧಾನ ಹೊರಹಾಕಿದ್ದರು. ನನ್ನಂತಹ ನಟಿಗೆ ಹೀಗೆ ಆಗಿರಬೇಕಾಗದ್ದರೆ ಸಾಮಾನ್ಯ ಹೆಣ್ಣು
ಮಕ್ಕಳ ಕತೆಯೇನು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ನೈಜ ಆರೋಪಿಗಳನ್ನು ಬಂಧಿಸಿದಾಗ ನಟಿ ರಶ್ಮಿಕಾ ಮಂದಣ್ಣ ಪೊಲೀಸರಿಗೆ ಧನ್ಯವಾದ ತಿಳಿಸಿದ್ದರು. ನಿಮ್ಮ ಒಪ್ಪಿಗೆ ಇಲ್ಲದೇ
ನಿಮ್ಮ ಚಿತ್ರವನ್ನು ಬಳಸಿ ಮಾರ್ಫ್ ಮಾಡಿದರೆ ಅದು ತಪ್ಪು ಎಂದು ನಟಿ ಹೇಳಿದ್ದಾರೆ.
ಇದೀಗ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.