ಇಬ್ರಾಹಿಂ ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ
ಮುಂಬೈ,ಏ.೩೦- ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಅವರ ಹಿರಿಯ ಪುತ್ರ ಇಬ್ರಾಹಿಂ ಅಲಿ ಖಾನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ತಮ್ಮ ಮ್ಯಾಜಿಕ್ ತೋರಿಸಲಿದ್ದಾರೆ ಈ ನಟ. ಆದರೆ ಇದಕ್ಕೂ ಮೊದಲು, ಇಬ್ರಾಹಿಂ ಅಲಿ ಖಾನ್ ಸಾಮಾಜಿಕ ಮಾಧ್ಯಮ ಪ್ರಪಂಚದಿಂದ ದೂರವೇ ಉಳಿದಿದ್ದ ಇಬ್ರಾಹಿಂ ಇದೀಗ ಇನ್‌ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದ್ದಾರೆ, ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇಬ್ರಾಹಿಂ ಅವರೇ ಪಾಪರಾಜಿಗಳ ಮುಂದೆ ಇದನ್ನು ಹೇಳಿದ್ದಾರೆ.ಏಪ್ರಿಲ್ ೨೯ ರಂದು ನಗರದಲ್ಲಿ ಕಾಣಿಸಿಕೊಂಡಿದ್ದ ಇಬ್ರಾಹಿಂಗೆ ಪಾಪರಾಜಿಗಳು ಇನ್‌ಸ್ಟಾಗ್ರಾಮ್‌ನಲ್ಲಿಲ್ಲ ಏಕೆ ಎಂದು ಕೇಳಿದಾಗ, ಇಬ್ರಾಹಿಂ ತನ್ನ ಸಂಪೂರ್ಣ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಇಬ್ರಾಹಿಂ, ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಇಲ್ಲ, ಇಂದು ೧೧ ಗಂಟೆಗೆ ಇನ್‌ಸ್ಟಾಗ್ರಾಮ್‌ಗೆ ಬರುತ್ತೇನೆ ಎಂದು ತಿಳಿಸಿದ್ದಾರೆ. ಈಗ ಇಬ್ರಾಹಿಂ ಅಲಿ ಖಾನ್ ತಮ್ಮ ಅಭಿಮಾನಿಗಳಿಗೆ ಇಂದು ಅಂದರೆ ಏಪ್ರಿಲ್ ೩೦ ರಂದು ದೊಡ್ಡ ಉಡುಗೊರೆಯನ್ನು ನೀಡಲಿದ್ದಾರೆ. ಪ್ರಸ್ತುತ ಇಬ್ರಾಹಿಂ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಇಂದು ತನ್ನ ಇನ್‌ಸ್ಟಾಗ್ರಾಮ್ ಚೊಚ್ಚಲ ಪ್ರವೇಶದ ಜೊತೆಗೆ ತನ್ನ ಚೊಚ್ಚಲ ಚಿತ್ರಗಳ ಬಗ್ಗೆ ನವೀಕರಣಗಳನ್ನು ನೀಡಲಿದ್ದಾರೆ. ಇಂದು ಇಬ್ರಾಹಿಂ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಆಗಿ ಪಾದಾರ್ಪಣೆ ಮಾಡಲಿದ್ದಾರೆ ಮತ್ತು ತಮ್ಮ ಯೋಜನೆಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.ಇಬ್ರಾಹಿಂ ಅಲಿ ಖಾನ್ ಅವರು ತಮ್ಮ ಸರ್ಜಮೀನ್ ಚಿತ್ರದ ಮೂಲಕ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಹುಶಃ ಅವರು ಅದರ ಬಗ್ಗೆ ಮಾಹಿತಿಯನ್ನು ನೀಡಬಹುದು. ವರದಿಗಳನ್ನು ನಂಬುವುದಾದರೆ, ಈ ಚಿತ್ರವು ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದೆ. ಸರ್ಜಮೀನ್ ಚಿತ್ರ ೨೦೨೫ ರಲ್ಲಿ ಬಿಡುಗಡೆಯಾಗಬಹುದು. ಬೊಮನ್ ಇರಾನಿ ಅವರ ಪುತ್ರ ಕಯೋಜ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ.