ಡೆಲ್ಲಿ ಓಟಕ್ಕೆ ಬ್ರೇಕ್ ಹಾಕಿದ ಕೋಲ್ಕತ್ತಾ
ಕೋಲ್ಕತ್ತಾ: ವರುಣ್ ಚಕ್ರವರ್ತಿ ಅವರ ಸ್ಪಿನ್ ಜಾದೂ ನೆರವಿನಿಂದ ಕೋಲ್ಕತ್ತಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಈಡನ್ ಮೈದಾನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ಕೋಲ್ಕತ್ತಾ 16.3ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ಗಳಿಸಿತು.
ಕೋಲ್ಕತ್ತಾ ಪರ ಫಿಲ್ ಸಾಲ್ಟ್ 68, ಸುನಿಲ್ ನರೈನ್ 15, ರಿಂಕು 11, ಶ್ರೇಯಸ್ ಅಯ್ಯರ್ ಅಜೇಯ 33, ವೆಂಕಟೇಶ್ ಅಯ್ಯರ್ ಅಜೇಯ 26 ರನ್ ಹೊಡೆದರು.
ಡೆಲ್ಲಿ ಪರ ಅಕ್ಷರ್ ಪಟೇಲ್ 25ಕ್ಕೆ 2 ವಿಕೆಟ್ ಪಡೆದರು.
ವಿಲಿಯಮ್ಸ್ 38ಕ್ಕೆ 1 ವಿಕೆಟ್ ಪಡೆದರು.
ವರುಣ್ ಚಕ್ರವರ್ತಿ ಸ್ಪಿನ್ ಬಲೆಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ ಯಾವುದೇ ಅರ್ಧಶತಕಗಳಿಲ್ಲದೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 154 ರನ್‍ಗಳ ಗುರಿ ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್-ಮೆಕ್ಗುರ್ಕ್ ಆಕ್ರಮಣಕಾರಿ ಆಟಕ್ಕೆ ಮುಂದಾದರೂ, ದೊಡ್ಡ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ಈ ಜೋಡಿ ಮೊದಲ ವಿಕೆಟ್‍ಗೆ 1.3 ಓವರ್ಗಳಲ್ಲಿ 17 ರನ್‍ಗಳ ಜೊತೆಯಾಟ ನೀಡಿದರು. ಈ ವೇಳೆ ಪೃಥ್ವಿ ಶಾ 13 ರನ್ ಗಳಿಸಿ ಔಟಾದರೆ, ಜೇಕ್ ಫ್ರೇಸರ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಾಯ್ ಹೋಪ್ 6 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವೇಳೆ ನಾಯಕ ಪಂತ್ ಮತ್ತು ಅಭಿಷೇಕ್ ಪೊರೆಲ್ ಜೊತೆಗೂಡಿ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಈ ವೇಳೆ 15 ಎಸೆತಗಳಲ್ಲಿ 18 ರನ್ ಗಳಿಸಿದ್ದ ಅಭಿಷೇಕ್ ಪೊರೆಲ್ ಔಟಾದರು. ಬಳಿಕ ಉತ್ತಮವಾಗಿ ಆಡುತ್ತಿದ್ದ ನಾಯಕ ರಿಷಬ್ ಪಂತ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.