ವಿಶ್ವ ಸುಂದರಿ ಬ್ಯೂನಸ್ ಐರಿಸ್ ಗೆದ್ದ ೬೦ ವಯಸ್ಸಿನ ಅಲೆಜಾಂಡ್ರಾ ಮರಿಸಾ ರೋಡ್ರಿಗಸ್
ಬ್ಯೂನಸ್ ಐರಿಸ್,ಏ.೨೮-೬೦ ನೇ ವಯಸ್ಸಿನಲ್ಲಿ, ಅಲೆಜಾಂಡ್ರಾ ಮರಿಸಾ ರೋಡ್ರಿಗಸ್ ವಿಶ್ವ ಸುಂದರಿ ಬ್ಯೂನಸ್ ಐರಿಸ್ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ವಯಸ್ಸಿನಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಯಸ್ಸು ಕೇವಲ ಸಂಖ್ಯೆ ಮತ್ತು ಸೌಂದರ್ಯವು ವಯಸ್ಸಿನ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಹೌದು, ೬೦ ನೇ ವಯಸ್ಸಿನಲ್ಲಿ, ಜನರು ನಿವೃತ್ತಿಯ ಬಗ್ಗೆ ಯೋಚಿಸಿದಾಗ, ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಹೆಸರು ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. ಅಲೆಜಾಂಡ್ರಾ ತನ್ನ ವಯಸ್ಸಿನ ಈ ಹಂತದಲ್ಲಿ ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ೨೦೨೪ ಪ್ರಶಸ್ತಿಯನ್ನು ಗೆದ್ದಿದ್ದಾರೆ . ವಿಶ್ವ ಸುಂದರಿ ಹೆಸರು ಕೇಳಿದ ತಕ್ಷಣ, ನಮ್ಮ ಮನಸ್ಸಿನಲ್ಲಿ ಸುಂದರ ಮತ್ತು ಯುವತಿಯ ಚಿತ್ರ ಹೊರಹೊಮ್ಮುತ್ತದೆ. ಉದಾಹರಣೆಗೆ, ಸುಶ್ಮಿತಾ ಸೇನ್ ಅವರು ೧೯೯೪ ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಾಗ ೧೮ ವರ್ಷ ವಯಸ್ಸಿನವರಾಗಿದ್ದರು. ೨೦೦೦ ರಲ್ಲಿ, ೨೨ ವರ್ಷದ ಲಾರಾ ದತ್ತಾ ಮತ್ತು ೨೦೨೧ ರಲ್ಲಿ, ೨೧ ವರ್ಷದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆದರು. ಆದರೆ ಅಲೆಜಾಂಡ್ರಾ ಈ ವಯಸ್ಸಿನಲ್ಲಿ ಅದ್ಭುತಗಳನ್ನು ಮಾಡಿದ್ದಾರೆ.
ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್ ರೇಸ್‌ನಲ್ಲಿ ಭಾಗವಹಿಸಿದ್ದ ೧೮ ವರ್ಷದಿಂದ ೭೩ ವರ್ಷ ವಯಸ್ಸಿನ ೩೪ ಸುಂದರಿಯರನ್ನು ಸೋಲಿಸುವ ಮೂಲಕ ಅವರು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ೬೦ ನೇ ವಯಸ್ಸಿನಲ್ಲಿ ಬ್ಯೂನಸ್ ಐರಿಸ್ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ. ಪ್ರಶಸ್ತಿ ಗೆದ್ದ ನಂತರ, ತೀರ್ಪುಗಾರರು ನನ್ನ ಆತ್ಮವಿಶ್ವಾಸ ಮತ್ತು ನನ್ನ ಉತ್ಸಾಹವನ್ನು ಗಮನಿಸಿದ್ದಾರೆ ಎಂದು ಅಲೆಜಾಂಡ್ರಾ ಹೇಳಿದ್ದಾರೆ .ಮಹಿಳೆಯರು ಧೈರ್ಯದಿಂದ ಅಡೆತಡೆಗಳನ್ನು ಮುರಿಯಬಹುದು. ಈ ಹಿಂದೆ ೧೮ ರಿಂದ ೨೮ ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ನಿಯಮ ಇತ್ತು, ಆದರೆ ಸೆಪ್ಟೆಂಬರ್ ೨೦೨೩ ರಲ್ಲಿ, ವಿಶ್ವ ಸುಂದರಿ ಸಂಸ್ಥೆ ಗರಿಷ್ಠ ವಯಸ್ಸಿನ ಮಿತಿಯನ್ನು ತೆಗೆದುಹಾಕಿದೆ. ಅಂದರೆ ೧೮ ವರ್ಷ ಮೇಲ್ಪಟ್ಟ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಅರ್ಜೆಂಟೀನಾದ ಲಾ ಪ್ಲಾಟಾ ನಿವಾಸಿ. ಅವರು ವೃತ್ತಿಯಲ್ಲಿ ವಕೀಲರು ಮತ್ತು ಪತ್ರಕರ್ತರು. ಅಲೆಜಾಂಡ್ರಾ ಅವರ ಈ ಗೆಲುವು ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಲಿದ. ಇದರ ನಂತರ, ಅವರು ಮುಂದಿನ ತಿಂಗಳು ಅಂದರೆ ಮೇ ೨೦೨೪ ರಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಅರ್ಜೆಂಟೀನಾದಲ್ಲಿ ಬ್ಯೂನಸ್ ಐರಿಸ್ ಪ್ರತಿನಿಧಿಸುತ್ತಾರೆ. ಇದರಲ್ಲಿ ಅವರು ವಿಜೇತರಾದರೆ, ಅವರು ಸೆಪ್ಟೆಂಬರ್ ೨೦೨೪ ರಲ್ಲಿ ಮೆಕ್ಸಿಕೊದಲ್ಲಿ ನಡೆಯಲಿರುವ ವಿಶ್ವ ಸುಂದರಿಯಲ್ಲಿ ಅರ್ಜೆಂಟೀನಾವನ್ನು ವಿಶ್ವದ ಮುಂದೆ ಪ್ರತಿನಿಧಿಸುತ್ತಾರೆ.