ಟಿ೨೦ ವಿಶ್ವಕಪ್‌ಗೆ ಇಬ್ಬರು ಮಕ್ಕಳಿಂದ ತಂಡ ಪ್ರಕಟ..!
ವೆಲ್ಲಿಂಗ್ಟನ್.ಏ.೨೯- ಮುಂಬರುವ ಟಿ೨೦ ವಿಶ್ವಕಪ್‌ಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ವಿಶಿಷ್ಟ ಶೈಲಿಯಲ್ಲಿ ತಂಡವನ್ನು ಪ್ರಕಟಿಸಿದೆ.
ಪ್ರತಿಷ್ಠಿತ ಟೂರ್ನಿಗೆ ೧೫ ಆಟಗಾರರನ್ನೊಳಗೊಂಡ ತಂಡವನ್ನು ಇಬ್ಬರು ಮಕ್ಕಳ ಮೂಲಕ ತಂಡವನ್ನು ಘೋಷಿಸಲಾಯಿತು.
ಮಕ್ಕಳಾದ ಮಾತಿಲ್ಡಾ ಮತ್ತು ಆನಗಸ್ ಯುಎಸ್‌ನಲ್ಲಿ ನಡೆಯಲಿರುವ ಟಿ೨೦ ವಿಶ್ವಕಪ್‌ಗೆ ನ್ಯೂಜಿಲ್ಯಾಂಡ್ ತಂಡವನ್ನು ಪ್ರಕಟಿಸಿದರು.
ನ್ಯೂಜಿಲ್ಯಾಂಡ್ ತಂಡದಲ್ಲಿ ಅಚ್ಚರಿ ಏನೂ ಇಲ್ಲ. ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಲಿದ್ದಾರೆ.
೨೦೨೩ರ ಏಕದಿನ ವಿಶ್ವಕಪ್ ಹೀರೊ ಭಾರತ ಮೂಲದ ರಚಿನ್ ರವೀಂದ್ರಗೆ ತಂಡದಲ್ಲಿ
ಸ್ಥಾನ ನೀಡಲಾಗಿದೆ. ವೇಗಿ ಟ್ರೆಂಟ್ ಬೌಲ್ಟ್ ಆಡಲಿದ್ದಾರೆ.