ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

ಸಂಜೆವಾಣಿ ವಾರ್ತೆ,
ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವದ ಪ್ರಯುಕ್ತ ಶಂಕರ್ ಲಿಂಗ ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಮೃತರಾಗಿದ್ದು ಓರ್ವನಿಗೆ ಗಂಭೀರ ಗಾಯಗಳಾಗಿವೆ.
ಭಾನುವಾರ ಸಂಜೆ ಗೋಧೋಳಿ ಮುಹೂರ್ತದಲ್ಲಿ ನಡೆದಿದ್ದ ಮಹಾರಥೋತ್ಸವದಲ್ಲಿ, ರಥ ಎಳೆಯುವ ವೇಳೆ ಆಯತಪ್ಪಿ ಚಕ್ರದಡಿ ಮೂರು ಸಹ ಸಿಲುಕಿದ್ದಾರೆ.
ಸಾಬು ಶಿಂಧೆ (55) ಹಾಗೂ ಅಭಿಷೇಕ ಮುಜುಗೊಂಡ (16) ಮೃತಪಟ್ಟಿದ್ದು,
ಬಂಡು ಕಟಕದೋಂಡ (32) ಈತನಿಗೆ ಗಂಭೀರ ಗಾಯಗಳಾಗಿದ್ದು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೂವ ರು ಸಹ ಲಚ್ಯಾಣ ಗ್ರಾಮದವರಾಗಿದ್ದಾರೆ.
ಇಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.