ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶ: ರಾಹುಲ್

ಸಂಜೆವಾಣಿ ವಾರ್ತೆ,
ವಿಜಯಪುರ. ಏ.26- ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ. ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ‌. ಆದ್ದರಿಂದ ಮತದಾರರು ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಗರದ ಸೊಲ್ಲಾಪುರ ರಸ್ತೆಯ ಬಿಎಲ್ಡಿಇ ನೂತನ ಕ್ಯಾಂಪಸ್ ಆವರಣದಲ್ಲಿ ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಪರ ಪ್ರಚಾರ ನಡೆಸಿ ಮಾತನಾಡಿದರು.
ಸಂವಿಧಾನದಿಂದಲೇ ಜನರಿಗೆ ಎಲ್ಲ ಹಕ್ಕುಗಳು ಸಿಕ್ಕಿವೆ. ಇದಕ್ಕೂ ಮುನ್ನ ರಾಜ ಮಹಾರಾಜರು ಆಡಳಿತ ಮಾಡುತ್ತಿದ್ದರು. ಸಂವಿಧಾನ ನೀಡಿದ ಹಕ್ಕಿನಿಂದ
ಇಂದು ಬಡವರ ದಲಿತರ, ಆದಿವಾಸಿಗಳ ಬಳಿ ಅಧಿಕಾರ ಧ್ವನಿ ಇದೆ ಎಂದರು.
ಒಂದು ಕಡೆ ನರೇಂದ್ರ ಮೋದಿ ಸಂವಿಧಾನವನ್ನು ಕೊನೆಗಾಣಿಸಲು ಹೊರಟಿದ್ದಾರೆ. ಚುನಾವಣೆ ಗೆದ್ದರೆ ಸಂವಿಧಾನ ಬದಲಾಯಿಸಲು ನಾಶ ಮಾಡಲು ಹೊರಟಿದ್ದಾರೆ. ಅವರು ಆಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಮಾತನ್ನು ಆಡಿದ್ದಾರೆ. ಒಂದು ಕಡೆ ಬಿಜೆಪಿ ಮೋದಿ ಹಾಗೂ ಮತ್ತೊಂದೆಡೆ ನಮ್ಮ ಕಾಂಗ್ರೆಸ್ ಪಕ್ಷ ಇಂಡಿಯಾ ಮೈತ್ರಿ ಕೂಟ ಇದೆ. ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಮತ ನೀಡಬೇಕು ಎಂದು ತಿಳಿಸಿದರು.
ನರೇಂದ್ರ ಮೋದಿ 10 ವರ್ಷದಲ್ಲಿ ಕೆಲವರನ್ನು ಕೋಟ್ಯಾಧಿಪತಿಗಳನ್ನು ಮಾಡಿದ್ದಾರೆ.
ಭಾರತ ದೇಶದ ಸಂಪತ್ತು 20 ಜನರ ಬಳಿದೆ ಇದೆ. ಎಲ್ಲಾ ಅದಾನಿ ಹಾಗೂ ಅಂಥವರ ಬಳಿ ನೀಡಿದ್ದಾರೆ ಏರ್ ಪೋರ್ಟ್, ಸೋಲಾರ್ ಎನರ್ಜಿ ನೀಡಿದ್ದಾರೆ. ಬಡವರಿಗೆ ಏನೂ ಕೂಡಾ ಸಿಕ್ಕಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ನಾವು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅದರಿಂದ ಬಡವರಿಗೆ ಅನಕೂಲವಾಗಿದೆ.
ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವ ನಿಧಿ ಐದು ಗ್ಯಾರಂಟಿಗಳನನ್ನು ಕರ್ನಾಟಕದ ಜನರಿಗೆ ನೀಡಿದ್ದೇವೆ.
ಬಿಜೆಪಿಯವರು 25 ಜನರ ಕೋಟ್ಯಧೀಶರನ್ನು ಹುಟ್ಟಿ ಹಾಕಿದೆ.
ನಮ್ಮ ಸರ್ಕಾರ ಕೋಟಿ ಕೋಟಿ ಲಾಕ್ ಪತಿಗಳನ್ನಾಗಿ ಮಾಡಲು ಹೊರಟಿದೆ. ನರೇಂದ್ರ ಮೋದಿ ಎಷ್ಟು ಹಣವನ್ನು ಶ್ರೀಮಂತರಿಗೆ ಮಾಡಿದ್ದಾರೆ. ಅದನ್ನು ನಾವು ಬಡವರಿಗೆ, ರೈತರಿಗೆ, ಯುವಕರಿಗೆ ನೀಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಮೋದಿ ಹೇಳಿದ್ದರು. ಆದರೆ ದಿವಾಳಿ ಆಗಿಲ್ಲ.
ಮೋದಿ ಅವರೇ ತಿಳಿದುಕೊಳ್ಳಿ
ಕರ್ನಾಕಟದ ಪ್ರತಿ ಮಹಿಳೆಯರಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಸಿಗುತ್ತದೆ. ಮಹಿಳೆಯರಿಗೆ ಹಣ ಕೊಡುವುದರಿಂದ ಅವರು ದೇಶದ ಕುಟುಂಬದ ರಕ್ಷಣೆ ಮಾಡುತ್ತಾರೆ. ಮಹಿಳೆಯರು ಹೊರಗಡೆ 8 ಗಂಟೆ ಕೆಲಸ ಮಾಡಿ ಮನೆಯಲ್ಲಿ ಮಕ್ಕಳ ಪಾಲನೆ ಹಾಗೂ ಇತರೆ ಕೆಲಸಗಳನ್ನು 8 ಗಂಟೆಗಳ ಕಾಲ ಮಾಡುತ್ತಾರೆ
ಇದಕ್ಕಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದೇವೆ.
ಈಗ ನಾ ಹೇಳುವುದನ್ನು ಕೇಳಿದರೆ ಜೋರಾಗಿ ಚೆಪ್ಪಾಳೆ ಹೊಡೆಯುತ್ತೀರಿ.
ಇಂಡಿಯಾ ಮೈತ್ರಿ ಕೂಟ ಆಧಿಕಾರಕ್ಕೆ ಬರುತ್ತದೆ. ದೇಶದ ಎಲ್ಲಾ ಬಡವರು, ಮಹಿಳೆಯರ ಮಾಹಿತಿ ಸಂಗ್ರಹ ಮಾಡುತ್ತೇವೆ.
ಒಂದು ಬಡ ಕುಟುಂಬದ ಓರ್ವ ಮಹಿಳೆಯನ್ನು ಆಯ್ಕೆ ಮಾಡುತ್ತೇವೆ. ಆ ಮಹಿಳೆಗೆ ನಮ್ಮ ಸರ್ಕಾರ ವರ್ಷಕ್ಕೆ 1 ಲಕ್ಷ ರೂಪಾಯಿ ಹಾಕಲಾಗುತ್ತದೆ.
ಕರ್ನಾಟಕ 24 ಸಾವಿರ ಕೊಡುವ ಶಕ್ತಿ ಯೋಜನೆ ಇದ್ದರೆ ಕೇಂದ್ರ 1ಲಕ್ಷ ಕೊಡುತ್ತದೆ.
ಪ್ರತಿ ತಿಂಗಳು 10, 500 ರೂಪಾಯಿ ಟಕಾ ಟಕ್ ಎಂದು ಬ್ಯಾಂಕ್ ಅಕೌಂಟ್ ಗೆ ಹಾಕುತ್ತೇವೆ. ಪ್ರತಿ ತಿಂಗಳು 1 ನೇ ತಾರೀಖಿನಂದು ಬ್ಯಾಂಕ್ ಅಕೌಂಟಿಗೆ 10,500 ಹಾಕಲಾಗುತ್ತದೆ. ಎಲ್ಲಿಯವರೆಗೆ ಬಡತನದಿಂದ ಹೊರ ಬರಲು ಆಗಲ್ಲವೋ ಅಲ್ಲಿಯವರೆಗೂ 10,500 ಹಾಕಲಾಗುತ್ತದೆ.
ಕರ್ನಾಟಕದ ಯುವ ನಿಧಿಯಲ್ಲಿ ನಿರುದ್ಯೋಗಿ ಪದವಿ ಯುವಕರಿಗೆ 3000 ಹಣ ನೀಡಲಾಗುತ್ತದೆ.
ಮೋದಿ ಅವರು ಶ್ರೀಮಂತರ ಪರವಾಗಿದ್ದು ಬಡವರಿಗೆ ನಿರ್ಲಕ್ಷ್ಯ ಮಾಡಿದ್ದಾರೆ. ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಏನೂ ಮಾಡಿಲ್ಲ.
ಇಂಡಿಯಾ ಘಟ ಬಂಧನ ಸರ್ಕಾರ ಜಗತ್ತಿನ ಮೊದಲ ಸರ್ಕಾರವಾಗಲಿದೆ. ಬಡ ಯುವಕರಿಗೆ ಹಣ ನೀಡಲಿದೆ.
ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಎಂದರು.
ಖಾಸಗಿ,. ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಉದ್ದಿಮೆಗಳಲ್ಲಿ ಯುವಕರಿಗೆ ಉದ್ಯೋಗ ನೀಡುತ್ತದೆ.
ಡಿಪ್ಲೋಮಾ, ಪದವಿ ಸ್ನಾತಕೋತ್ತರ ಪದವಿ ಪಡೆದವರಿಗೆ ಎಲ್ಲರಿಗೂ ಸರ್ಕಾರ ಒಂದು ವರ್ಷದಲ್ಲಿ ಉದ್ಯೋಗ ನೀಡಲಿದೆ.
ನರೇಗಾ ಮಾದರಿಯಲ್ಲಿ ಉದ್ಯೋಗ ನೀಡುತ್ತೇವೆ.
8500 ಹಣ ಬ್ಯಾಂಕ್ ಅಕೌಂಟ್ ಮೂಲಕ ಯುವಕರ ಅಕೌಂಟಿಗೆ ಹಣ ಹಾಕಲಾಗುತ್ತದೆ.
ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡಿಲ್ಲಾ.
ರೈತರ ಬೆಳೆಗಳಿಗೆ ಎಂಎಸ್ಪಿ ದರ ನೀಡಿಲ್ಲಾ.
ನಮ್ಮ ಸರ್ಕಾರ ಆಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡುತ್ತೇವೆ. ಬೆಳೆಗಳಿಗೆ ಎನ್ ಎಸ್ಪಿ ದರ ನಿಗದಿ ಮಾಡುತ್ತೇವೆ.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಪಟ್ಟು ಸಂಬಳ ಹಾಗೂ ನರೇಗಾ ದಲ್ಲಿ ನಿತ್ಯ 400 ರೂಪಾಯಿ ಸಂಬಳ ನೀಡುತ್ತೇವೆ.
ಬಿಜೆಪಿಯವರು ಅಗ್ನಿಪಥ ಯೋಜನೆ ಮಾಡಿದರು.
ಭಾರತದ ಯುವಕರಿಗೆ ಅನಕೂಲವಾಗಿಲ್ಲ.
ಅಗ್ನಿಪಥ ಯೋಜನೆಯನ್ನು ರದ್ದು ಮಾಡುತ್ತೇವೆ.
ಎಲ್ಲ ರೀತಿಯ ಒಂದೇ ಯೋಜನೆ ಸೌಲಭ್ಯ ನೀಡಲಾಗುತ್ತದೆ. ಮೋದಿ ಅವರು ತಪ್ಪಾದ ಐದು ಜಿಎಸ್ಟಿ ವ್ಯವಸ್ಥೆ ಜಾರಿ ಮಾಡಿದ್ದಾರೆ.
ಕರ್ನಾಟಕದ ಜನರಿಗೆ ಗೊತ್ತು 100 ರೂಪಾಯಿ ಹಣ ನೀಡಿದರೆ 13 ರೂಪಾಯಿ ವಾಪಸ್ ಬರುತ್ತಿದೆ.
ರಾಜ್ಯದ ಜನರಿಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಈ ಅನ್ಯಾಯವನ್ನು ನಾವು ಸರಿ ಮಾಡುತ್ತೇವೆ.
ಮೋದಿ ಅವರ ಭಾಷಣ ನೀವು ಕೇಳುತ್ತಿದ್ದೀರಿ, ಮೋದಿ ಅವರು ಗಾಬರಿಗೊಂಡಿದ್ದಾರೆ.
ಕೆಲವೇ ದಿನಗಳಲ್ಲಿ ವೇದಿಕೆ ಮೇಲೆ ಕಣ್ಣೀರು ಹಾಕಲಿದ್ದಾರೆ.
24 ಗಂಟೆ ಕಾಲ ನಿಮ್ಮದೇ ಧ್ಯಾನ ಮಾಡುತ್ತಾರೆ. ಪಾಕಿಸ್ತಾನ, ಚೀನಾ ಬಗ್ಗೆ ಮಾತನಾಡುತ್ತಾರೆ. ಇಲ್ಲದ ವಿಚಾರಗಳನ್ನು ಮಾತನಾಡುತ್ತಾರೆ.
ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ ಸವಾಲುಗಳಿವೆ.
ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷ ಪರಿಹಾರ ನೀಡಲಿದೆ.
ಮೋದಿ 10 ವರ್ಷದಲ್ಲಿ ಕೇವಲ ಬಡವರ ಹಣ ಕಿತ್ತುಕೊಂಡಿದ್ದಾರೆ.
ಕೆಲವರನ್ನು ಅರಬ್ ಪತಿ ಮಾಡಿದ್ದಾರೆ. ಅವರ ಬಳಿ ಇದ್ದ ಹಣ ಶೇ.75 ರಷ್ಟು ಬಡವರ ಬಳಿ ಇದ್ದ ಹಣದಷ್ಟಿದೆ.
ಬಡವರು, ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ, ಆದಿವಾಸಿಗಳಿಗೆ ಜಾಗವಿಲ್ಲ.
ಒಂದೇ ಮಾತನ್ನೂ ಹೇಳುವುದಾದರೆ
ಎಷ್ಟು ಹಣವನ್ನು ಮೋದಿ ಅವರು ಶ್ರೀಮಂತರಿಗೆ ನೀಡಿದ್ದಾರೆ.
ಅಷ್ಟು ಹಣ ನಾವು ಬಡವರಿಗೆ ನೀಡುತ್ತೇವೆಂದು ರಾಹುಲ್ ಗಾಂಧಿ ಹೇಳಿದರು.
ಹೃದಯದ ಅಂತರಾಳದಿಂದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.
ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ.
ಕಾರ್ಯಕರ್ತರು ಹುಲಿ ಹಾಗೂ ಸಿಂಹ ಇದ್ದೀರಿ
ಎಲ್ಲರಿಗೂ ಪ್ರೀತಿಯ ಧನ್ಯವಾದಗಳು ಎಂದು ರಾಹುಲ್ ಗಾಂಧಿ ಭಾಷಣ ಮುಗಿಸಿದರು.