ಸನ್ ರೈಸರ್ಸ್ ವಿರುದ್ಧ ಗೆದ್ದು ಬೀಗಿದ ಆರ್ಸಿಬಿ
ಹೈದ್ರಾಬಾದ್: ರಜತ್ ಪಾಟಿದಾರ್ ಅವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಆರ್ಸಿಬಿ ತಂಡ ಸನ್ ರೈಸರ್ಸ್ ವಿರುದ್ಧ 35 ರನ್ಗಳಿಂದ ಗೆದ್ದುಕೊಂಡಿದೆ.
ರಾಜೀವ್ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಸನ್ ರೈಸರ್ಸ್ 8 ವಿಜೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು.
ಸನ್ರೈಸರ್ಸ್ ಪರ ಅಭಿಷೇಕ್ ಶರ್ಮಾ 31, ಹೆಡ್ 1, ಮಾರ್ಕರಮ್ 7, ನಿತೀಶ್ ಕುಮಾತ್ 13, ಕ್ಲಾಸೆನ್ 7, ಶಹಬಾಕ್ 40, ಸಮಾದ್ 10, ನಾಯಕ ಕಮಿನ್ಸ್ 31, ಭುವನೇಶ್ವರ್ 13 ರನ್ ಗಳಿಸಿದರು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗು ರಜತ್ ಪಾಟಿದಾರ್ ಜವಾಬ್ದಾರಿಯುತ ಬ್ಯಾಟಿಂಗ್ ಫಲವಾಗಿ 207 ರನ್‍ಗಳ ಟಾರ್ಗೆಟ್ ಅನ್ನು ಹೈದ್ರಾಬಾದ್ ತಂಡಕ್ಕೆ ಆರ್‍ಸಿಬಿ ನೀಡಿದೆ. ಟಾಸ್ ಗೆದ್ದ ಆರ್‍ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ ಆರ್ಸಿಬಿ 7 ವಿಕೆಟ್‍ಗಳನ್ನು ಕಳೆದುಕೊಂಡು 206 ರನ್‍ಗಳನ್ನು ಪೇರಿಸಿದೆ.
ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‍ಗೆ 48 ರನ್ ಸೇರಿಸಿದರು.
ಫಾಫ ಡುಪ್ಲೆಸಿಸ್ (25) ವಿಕೆಟ್ ಕಳೆದುಕೊಳ್ಳಬೇಕಾಯಿತು. ಬಳಿಕ ಬಂದ ವಿಲ್ ಜ್ಯಾಕ್ಸ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕೇವಲ 6 ರನ್‍ಗಳಿಗೆ ಸೀಮಿತವಾಗಿ ಔಟ್ ಆದರು. ಇತ್ತ ಆಕ್ರಮಣಕಾರಿ ಆಟವಾಡುತ್ತಿದ್ದ ವಿರಾಟ್ ಕೊಹ್ಲಿ ಎರಡು ವಿಕೆಟ್ ಬೀಳುತ್ತಿದ್ದಂತೆ ಮಂದಗತಿ ಬ್ಯಾಟಿಂಗ್ ಶುರು ಮಾಡಿದರು. ಆದರೆ ನಾಲ್ಕನೇ ವಿಕೆಟ್ ಜೊತೆಯಾದ ರಜತ್ ಪಾಟಿದಾರ್ ಆರ್ಸಿಬಿಗೆ ಮತ್ತೊಮ್ಮೆ ಆಸರೆಯಾದರು. ಸಿಡಿಲಬ್ಬರ ಬ್ಯಾಟಿಂಗ್ ದರ್ಬಾರ್ ನಡೆಸಿದ ರಜತ್ ಪಾಟಿದಾರ್, ಮಯಾಂಕ್ ಮಾರ್ಕಂಡೆ ಓವರ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರು. ಈ ಮೂಲಕ ಕೇವಲ 20 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗು 2 ಬೌಂಡರಿ ನೆರೆವಿನಿಂದ ತಮ್ಮ ಐಪಿಎಲ್ನ ಐದನೇ ಅರ್ಧ ಶತಕ ಪೂರೈಸಿಕೊಂಡು ರಜತ್ ಪಾಟಿದಾರ್ ಔಟ್ ಆದರು.ರಜತ್ ಪಾಟಿದಾರ್ 50, ವಿರಾಟ್ ಕೊಹ್ಲಿ 51, ಗ್ರೀನ್ ಅಜೇಯ 37, ಲೊಮ್ರೊರ್ 7, ದಿನೇಶ್ ಕಾರ್ತಿಕ್ 11, ಸ್ವಪ್ನಿಲ್ 12 ರನ್ ಗಳಿಸಿದರು. ಸನ್‍ರೈಸರ್ಸ್ ಪರ ಜಯದೇವ್ ಉನಾದ್ಕಟ್ 3 ವಿಕೆಟ್ ಪಡೆದರು