ಆತಿಥೇಯ ಡೆಲ್ಲಿಗೆ ನಾಲ್ಕು ರನ್ ರೋಚಕ ಜಯ
ನವದೆಹಲಿ: ಮಾಡು ಇಲವೇ ಮಡಿ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.
225 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಪರ ವೃದ್ದಿಮಾನ್ ಸಾಹಾ 39, ನಾಯಕ ಶುಭಮನ್ 6 ಸಾಯಿ ಸುದರ್ಶನ್ 65, ಅಜಮತ್ಹುಲ್ಲಾ 1, ಡೇವಿಡ್ ವಾರ್ನರ್ 55, ರಶೀದ್ ಖಾನ್ ಅಜೇಯ 21, ಸಾಯಿ ಕಿಶೋರ್ 13 ರನ್ ಹೊಡೆದರು. ಡೆಲ್ಲಿ ಪರ ರಾಸೀಕ್ ಸಲಾಮ್ 44 ಕ್ಕೆ 3 ವಿಕೆಟ್ ಪಡೆದರು. ಕುಲ್ದೀಪ್ 2, ನೋರ್ಟ್ಜೆ 1ವಿಕೆಟ್ ಪಡೆದರು.
ಇದಕ್ಕೂ ಮುನ್ನ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಜೇಕ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಗೆ 3.2 ಓವರ್ಗಳಲ್ಲಿ 35 ರನ್ ಗಳ ಜೊತೆಯಾಟ ನೀಡಿದರು. ಈ ವೇಳೆ ಪೃಥ್ವಿ ಶಾ 11 ರನ್ ಮತ್ತು ಜೇಕ್ ಮೆಕ್ಗುರ್ಕ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಗಳ ಸಮೇತ 23 ರನ್ ಗಳಿಸಿ ಒಬ್ಬರ ಹಿಂದೆ ಒಬ್ಬರು ಔಟಾದರು. ನಂತರ ಬಂದ ಶಾಯ್ ಹೋಪ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಗ ಜೊತೆಗೂಡಿದ ಅಕ್ಷರ್ ಪಟೇಲ್ ಮತ್ತು ನಾಯಕ ರಿಷಭ್ ಪಂತ್ ಕುಸಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸರೆಯಾದರು ಹಾಗೂ ಗುಜರಾತ್ ಟೈಟನ್ಸ್ ಬೌಲರ್ ಗಳಿಗೆ ಬೆವರಿಳಿಸಿದರು. ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ತಂಡದ ಸ್ಕೋರ್ ಬೋರ್ಡ್ ಹೆಚ್ಚಿಸಿದರು. ಈ ಜೋಡಿ 4ನೇ ವಿಕೆಟ್ಗೆ 113 ರನ್ ಗಳ ಜೊತೆಯಾಟ ನಿರ್ಮಿಸಿತು.