ಮಾಧ್ಯಮಗಳ ಟೀಕೆಗೆ ಜಯಶಂಕರ್ ಕಿಡಿ
ಹೈದರಾಬಾದ್,ಏ.೨೪- ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ, ಭಾರತದ ಪ್ರಜಾಪ್ರಭುತ್ವದ ಕುರಿತು ಪಾಶ್ವಿಮಾತ್ಯ ರಾಷ್ಟ್ರಗಳ ಮಾಧ್ಯಮಗ ಟೀಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಪ್ರಜಾಪ್ರಭುತ್ವದ ಮತ್ತು ಇಲ್ಲಿನ ಆಗು ಹೋಗುಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ವರದಿ ಬಿತ್ತರಿಸುತ್ತಿವೆ ಜೊತೆಗೆ ಭಾರತವನ್ನು ಟೀಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಮಾಹಿತಿ ಕೊರತೆ ಕಾರಣ ಎಂದು ಹರಿಹಾಯ್ದಿದ್ದಾರೆ
ಹೈದರಾಬಾದ್‌ನಲ್ಲಿ ರಾಷ್ಟ್ರೀಯವಾದಿ ಚಿಂತಕರ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಡಾ.ಎಸ್ ಜೈಶಂಕರ್,ಪಾಶ್ಚಿಮಾತ್ಯ ಪತ್ರಿಕೆಗಳಿಂದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಶಬ್ದಗಳು ಬಹಳಷ್ಟು ಬರುತ್ತವೆ, ಪ್ರಜಾಪ್ರಭುತ್ವವನ್ನು ಟೀಕಿಸಿದರೆ, ಅವರಿಗೆ ಮಾಹಿತಿಯ ಕೊರತೆಯ ಕಾರಣವಲ್ಲ. ಅವರು ನಮ್ಮ ಚುನಾವಣೆಯಲ್ಲಿ ರಾಜಕೀಯ ಭಾಗೀದಾರರು ಎಂದು ಭಾವಿಸಿದಂತೆ ಇದೆ ಎಂದಿದ್ದಾರೆ
ವಿದೇಶಿ ಮಾಧ್ಯಮ ಸಂಸ್ಥೆಯ ಲೇಖನವನ್ನು ಉಲ್ಲೇಖಿಸಿದ ಜೈಶಂಕರ್, “ಕೆಲವು ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದಲ್ಲಿ ಸದ್ಯದ ವಾತಾರಣ ಸರಿಯಾಗಿಲ್ಲ. ಇಂತಹ ಪರಿಸ್ಥತಿಯಲ್ಲಿ ಚುನಾವಣೆ ಬೇಕಿತ್ತಾ ಎನ್ನುವ ಲೇಖನ ನೋಡಿದ್ದೇನೆ. ದೇಶದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ವಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಾಗತಿಕವಾಗಿ ರಾಜಕೀಯ ಭಾರತದಲ್ಲಿ ನುಸುಳುತ್ತಿದೆ. ಇದು ಸರಿಯಲ್ಲ, ಪಾಶ್ವಿಮಾತ್ಯ ದೇಶಗಳ ಮಾಧ್ಯಮಗಳು ಮತದಾರರ ಭಾಗವೆಂದು ಭಾವಿಸುತ್ತಾರೆ. ತಮ್ಮ ಗಡಿಯನ್ನು ಮೀರಿ ವರದಿ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದ್ದಾರೆ
ಈ ರೀತಿಯ ದಾಳಿಗಳು ಮತ್ತು ಟೀಕೆಗಳು ಮತ್ತು ಶ್ರೇಯಾಂಕಗಳು ಮತ್ತು ವರದಿಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ “ಚುನಾವಣಾ ವ್ಯವಸ್ಥೆ, ವಿದ್ಯುನ್ಮಾನ ಮತಯಂತ್ರ, ಚುನಾವಣಾ ಆಯೋಗ, ಹವಾಮಾನವನ್ನು ಸಹ ಪ್ರಶ್ನಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಈ ಸರ್ಕಾರ ಮಾಡಲಿರುವ ನಿರ್ಧಾರಗಳು ಮುಂದಿನ ಐದು ವರ್ಷಗಳ ಕಾಲ ಮಾತ್ರವಲ್ಲ, ಭಾರತಕ್ಕೆ, ಅದರ ಸಮಾಜಕ್ಕೆ ಮತ್ತು ಮುಂಬರುವ ಪೀಳಿಗೆಗೆ “ವಿಶ್ವಾಸದ ದೊಡ್ಡ ಮತ” ನೀಡುತ್ತದೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ