ದೇವರ ಚಿತ್ರದಲ್ಲಿ ಕಾಜಲ್ ನಟನೆ
ಹೈದರಾಬಾದ್ ,ಏ.೨೪-ಭಗವಂತ್ ಕೇಸರಿ ಚಿತ್ರದ ಮೂಲಕ ಬೆಡಗಿನ ತಾರೆ ಕಾಜಲ್ ಅಗರ್ವಾಲ್ ರೀ ಎಂಟ್ರಿ ಕೊಟ್ಟು ಎರಡನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈಗ ತನ್ನ ಸಿನಿಮಾಗಳ ಆಯ್ಕೆ ಹೆಚ್ಚಿಸಿಕೊಂಡಿದ್ದಾರೆ. ಮದುವೆಯಾದ ನಂತರ ಸಿನಿಮಾಗಳ ಸಂಖ್ಯೆ ಕಡಿಮೆ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು ಆದರೆ ಕಾಜಲ್ ಒಂದು ಕಡೆ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿ ಮತ್ತೊಂದು ಕಡೆ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಕಾಜಲ್ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಮಗಧೀರ ಚೆಲುವೆ ಕುರಿತು ಹೊಸ ಮಾಹಿತಿ ಬಂದಿದೆ. ಸ್ಟಾರ್ ನಟ ಜ್ಯೂ.ಎನ್ ಟಿ ಆರ್ ಅಭಿನಯದ ದೇವರ್ ಚಿತ್ರದಲ್ಲಿ ಕಾಜಲ್ ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಡಿದೆ.
ಇತ್ತೀಚೆಗಷ್ಟೇ ಚಿತ್ರದ ವಿಶೇಷ ಹಾಡಿಗೆ ಪೂಜಾ ಹೆಗ್ಡೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಪೂಜಾ ಹೆಗ್ಡೆ ಒಬ್ಬಳೇ ಅಲ್ಲ ಕಾಜಲ್ ಕೂಡ ಅವಳೊಂದಿಗೆ ಸೊಂಟ ಬಳುಕಿ ಸಲಿದ್ದಾರೆ ಎನ್ನಲಾಗಿದೆ. ಇಬ್ಬರೂ ನಟಿಯರು ಜೂನಿಯರ್ ಎನ್ ಟಿಆರ್ ಜೊತೆ ಹೆಜ್ಜೆ ಹಾಕಲಿದ್ದಾರೆ.
’ದೇವರ’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಕಾಜಲ್ ಡ್ಯಾನ್ಸ್ ಗೆ ಸೀಮಿತವೇ? ಅಥವಾ ನಟನೆಗೆ ಅವಕಾಶವಿದೆಯೇ ಎಂದು ಖಚಿತವಾಗಿಲ್ಲ. ಈ ಹಿಂದೆ ಜೂನಿಯರ್ ಎನ್ ಟಿಆರ್ ಜೊತೆಗೆ ಕಾಜಲ್ ಕೂಡ ನಾಯಕಿಯಾಗಿ ನಟಿಸಿದ್ದರು. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದವು.
ಈ ಹಿಂದೆಯೂ ಚಿರಂಜೀವಿ ರಾಮ್ ಚರಣ್ ಅಭಿನಯದ ’ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಕಾಜಲ್ ಜೊತೆ ನಟಿಸಿದ್ದಾರೆ.