ಸಚಿನ್‌ಗೆ ೫೧ನೇ ಹುಟ್ಟುಹಬ್ಬದ ಸಂಭ್ರಮ
ಮುಂಬೈ,ಏ.೨೪- ವಿಶ್ವ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಭಾರತ ತಂಡದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ತಮ್ಮ ೫೧ ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಅವರು ೨೪ ಏಪ್ರಿಲ್ ೧೯೭೩ ರಂದು ಮುಂಬೈನಲ್ಲಿ ಜನಿಸಿದ್ದಾರೆ.ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ಗಳು ಇಲ್ಲಿಯವರೆಗೆ ಸಾಧಿಸಲು ಸಾಧ್ಯವಾಗದಂತಹ ಮೈಲಿಗಲ್ಲುಗಳನ್ನು ಸಚಿನ್ ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಧಿಸಿದ್ದಾರೆ. ಪ್ರತಿಯೊಬ್ಬ ಯುವ ಆಟಗಾರನೂ ಸಚಿನ್‌ನಿಂದ ಸ್ಫೂರ್ತಿ ಪಡೆದು ಅವರಂತೆ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಲು ಬಯಸುತ್ತಾನೆ. ರೋಹಿತ್ ಶರ್ಮಾರಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ ದೊಡ್ಡ ಆಟಗಾರರು ಸಚಿನ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತಾರೆ.
ಸಚಿನ್ ತೆಂಡೂಲ್ಕರ್ ೧೯೮೯ ರಲ್ಲಿ ಕೇವಲ ೧೬ ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾ ಪರ ಓಡಿಐ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ್ದಾರೆ .ಸಚಿನ್ ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಸಚಿನ್‌ಗೆ ಅಪಾಯಕಾರಿ ಬೌನ್ಸರ್‌ಗೆ ತಗುಲಿ ಮೂಗಿನಲ್ಲಿ ರಕ್ತಸ್ರಾವವಾಗತೊಡಗಿತು, ಆದರೆ ಆಡುವುದು ಸಚಿನ್ ಬಿಡಲಿಲ್ಲ. ಆ ಸಮಯದಲ್ಲಿ ಪಾಕಿಸ್ತಾನದ ಅಪಾಯಕಾರಿ ಬೌಲರ್ ವಾಸಿಂ ಅಕ್ರಮ್ ತಮ್ಮ ವೇಗದ ಬೌಲಿಂಗ್‌ನಿಂದ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರು ಮತ್ತು ಸಚಿನ್ ಅವರ ಮೂಗಿಗೆ ವಾಸಿಮ್ ಅವರ ಬೌನ್ಸರ್ ಬಡಿದಿತ್ತು. ಆದರೂ ಈ ಪಂದ್ಯದಲ್ಲಿ ಯಾವುದೇ ಭಯವಿಲ್ಲದೆ ಪಾಕಿಸ್ತಾನದ ವೇಗಿಗಳನ್ನು ದಿಟ್ಟತನದಿಂದ ಎದುರಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಪರ ಕ್ರಿಕೆಟ್ ಆಡುವವರೆಗೂ ಹೊಸ ದಾಖಲೆಗಳನ್ನು ಸೃಷ್ಟಿಸಿ ದ್ದಾರೆ. ಯಾವುದೇ ಕ್ರಿಕೆಟಿಗನಿಗೂ ಮುರಿಯಲು ಸಾಧ್ಯವಾಗದಂತಹ ದಾಖಲೆಗಳನ್ನು ಸಚಿನ್ ಮಾಡಿದ್ದಾರೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೩೪ ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಹೊಂದಿದ್ದಾರೆ. ಇದಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ೧೦೦ ಶತಕ ಸಿಡಿಸಿದ ದಾಖಲೆ ಸಚಿನ್ ಅವರ ಹೆಸರಿನಲ್ಲಿದೆ. ಅದರಲ್ಲಿ ಸಚಿನ್ ೫೧ ಟೆಸ್ಟ್ ಮತ್ತು ೪೯ ಓಡಿಐ ಕ್ರಿಕೆಟ್ ಆಡಿದ್ದಾರೆ. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ೨೦೦ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ೧೫೯೨೧ ರನ್ ಗಳಿಸಿದ್ದಾರೆ. ಇದಲ್ಲದೆ, ಈ ಶ್ರೇಷ್ಠ ಬ್ಯಾಟ್ಸ್‌ಮನ್ ೪೬೩ ಏಕದಿನ ಪಂದ್ಯಗಳಲ್ಲಿ ೧೮೪೨೬ ರನ್ ಗಳಿಸಿದ್ದಾರೆ.