ಮೊದಲ ಹಂತದ ಮತದಾನಕ್ಕೆ ೩ ದಿನ ಬಾಕಿ ಸ್ಟಮಕ್:ಪ್ರಚಾರಕ್ಕೆ ರಂಗು
ನವದೆಹಲಿ,ಏ.೧೬- ದೇಶದಲ್ಲಿ ಹೊಸ ಸರ್ಕಾರ ರಚನೆಗೆ ಏಳು ಹಂತದ ಪೈಕಿ ಮೊದಲ ಹಂತದಲ್ಲಿ ೨೧ ರಾಜ್ಯಗಳು ಮತ್ತು ೪ ಕೇಂದ್ರಾಡಳಿತ ಪ್ರದೇಶದ ೧೦೨ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಇದೇ ೧೯ ರಂದು ನಡೆಯಲಿದ್ದು,ಮತದಾನಕ್ಕೆ ಮೂರೇ ದಿನ ಬಾಕಿ ಇದ್ದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.
ಛತ್ತೀಸ್‌ಗಢದ ೧೧ ಲೋಕಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಏಪ್ರಿಲ್ ೧೯, ಏಪ್ರಿಲ್ ೨೬ ಮತ್ತು ಮೇ ೭ ರಂದು ಚುನಾವಣೆ ನಡೆಯಲಿದೆ. ಬಸ್ತಾರ್ ಮಾತ್ರ ಏಪ್ರಿಲ್ ೧೯ ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು ನಾರಾಯಣಪುರದ ನಕ್ಸಲ್ ಪೀಡಿತ ಪ್ರದೇಶಗಳಿಗೆ ಹೆಲಿಕಾಪ್ಟರ್‌ನಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಇಂದು ತೆರಳಿತು
ಆಡಳಿತಾರೂಢ ಎನ್‌ಡಿಎ ನೇತೃತ್ವ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಕಣ್ಣಿಟ್ಟಿದ್ದರೆ, ಐಎನ್‌ಡಿಐಎ ಬಣ ಅಧಿಕಾರ ಕಸಿದುಕೊಳ್ಳುವ ಇನ್ನಿಲ್ಲದ ಕಸರತ್ತು ನಡೆಸಿದ್ದು ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಈ ನಡುವೆ ಮೊದಲ ಹಂತದ ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು ಜನಮನ ಗೆಲ್ಲಲು ವಿವಿದ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಏಪ್ರಿಲ್ ೧೯ ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಅರುಣಾಚಲ ಪ್ರದೇಶದ ಅರುಣಾಚಲ ಪ್ರದೇಶ ಪೂರ್ವ, ಅರುಣಾಚಲ ಪ್ರದೇಶ ಪಶ್ಚಿಮ, ಅಸ್ಸಾಂನ ದಿಬ್ರುಗಢ್, ಜೋರ್ಹತ್, ಕಾಜಿರಂಗ, ಲಖಿಂಪುರ, ಸೋನಿತ್ಪುರ್‍ಬಿಹಾರದ ಔರಂಗಾಬಾದ್, ಗಯಾ, ಜಮುಯಿ, ನಾವಡಾ, ಜಮ್ಮು ಮತ್ತು ಕಾಶ್ಮೀರದ ಉಧಂಪುರ, ಛತ್ತೀಸ್‌ಗಢದ ಬಸ್ತಾರ್, ಲಕ್ಷದ್ವೀಪದ ಲಕ್ಷದ್ವೀಪ, ಮಧ್ಯಪ್ರದೇಶದ ಛಿಂದ್ವಾರಾ, ಬಾಲಾಘಾಟ್, ಜಬಲ್ಪುರ್, ಮಂಡ್ಲಾ, ಸಿಧಿ, ಶಹದೋಲ್ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮಹಾರಾಷ್ಟ್ರದ ಚಂದ್ರಾಪುರ, ಭಂಡಾರಾ ,ಗೊಂಡಿಯಾ, ಗಡ್ಚಿರೋಲಿ – ಚಿಮೂರ್, ರಾಮ್ಟೆಕ್, ನಾಗ್ಪುರ,ಮಣಿಪುರದ ಒಳ ಮಣಿಪುರ, ಹೊರ ಮಣಿಪುರ, ರಾಜಸ್ಥಾನದ ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್, ಮೇಘಾಲಯದ ಶಿಲ್ಲಾಂಗ್, ತುರಾ
ಮಿಜೋರಾಂನ ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂನಲ್ಲಿ ಮತದಾನ ನಡೆಯಲಿದೆ
ಇದೇ ವೇಳೆ ತಮಿಳುನಾಡಿದ ೩ ಎಲ್ಲಾ ೩೯ ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೊತೆಗೆ
ತ್ರಿಪುರದ ತ್ರಿಪುರ ಪಶ್ಚಿಮ, ಉತ್ತರಾಖಂಡದ ತೆಹ್ರಿ ಗರ್ವಾಲ್, ಗರ್ವಾಲ್, ಅಲ್ಮೋರಾ, ನೈನಿತಾಲ್- ಉಧಮ್ಸಿಂಗ್ ನಗರ, ಹರಿದ್ವಾರ , ಪಶ್ಚಿಮ ಬಂಗಾಳದ ಕೂಚ್‌ಬೆಹಾರ್, ಅಲಿಪುರ್‍ದವಾರ್ಸ್, ಜಲ್ಪೈಗುರಿ,ಉತ್ತರ ಪ್ರದೇಶದಸಹರಾನ್‌ಪುರ, ಕೈರಾನಾ, ಮುಜಫರ್‍ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್ ಕ್ಷೇತ್ರಗಳಿಗೆ ಮತದಾನ ನಡೆಸಲಿದೆ.
ಮೊದಲ ಏಪ್ರಿಲ್ ೧೯, ಎರಡನೇ ಏಪ್ರಿಲ್ ೨೬, ಮೂರನೇ ಮೇ ೭, ನಾಲ್ಕನೇ ಮೇ ೧೩, ಐದನೇ ಹಂತ ಮೇ ೨೦, ಆರನೇ ಹಂತ ಮೇ ೨೫ ಮತ್ತು ಏಳನೇ ಜೂನ್ ೧ ರಂದು ಎಣಿಕೆ ಜೂನ್ ೪ ರಂದು ಮತದಾನ ನಡೆಯಲಿದೆ.
ಯಾರೆಲ್ಲಾ ಪ್ರಚಾರದಲ್ಲಿ ಭಾಗಿ
ಪ್ರಧಾನಿ ಮೋದಿ ಅವರು ಅಸ್ಸಾಂನಲ್ಲಿ ರೋಡ್ ಶೋ ಜೊತೆಗೆ ಪಶ್ಚಿಮ ಬಂಗಾಳದ ಬಲೂರ್‍ಘಾಟ್ ಮತ್ತು ರಾಯಗಂಜ್‌ನಲ್ಲಿ ನಡೆಸಲಿದ್ದು ಜನಮನ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಮತ್ತು ಸಚಿನ್ ಪೈಲಟ್ ಕ್ರಮವಾಗಿ ಜಮ್ಮು ಮತ್ತು ಕಥುವಾದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ರಾಹುಲ್ ಗಾಂಧಿ ಕೂಡ ಕೇರಳದಲ್ಲಿ ಪ್ರಚಾರ ನಡೆಸಲಿದ್ದಾರೆ.