೨೦೦ ಕೋಟಿ ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿದ ಜೈನ ದಂಪತಿ
ಸೂರತ್,ಏ.೧೬- ಗುಜರಾತ್‌ನ ಶ್ರೀಮಂತ ಜೈನ ದಂಪತಿಗಳು ಸುಮಾರು ೨೦೦ ಕೋಟಿ ರೂಪಾಯಿಯನ್ನು ದೇಣಿಗೆ ನೀಡಿ ಸನ್ಯಾಸ ಸ್ವೀಕರಿಸಿ ಮೋಕ್ಷಕ್ಕೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಸಮಾರಂಭದಲ್ಲಿ ಉದ್ಯಮಿ ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ತಮ್ಮ ಎಲ್ಲಾ ಸಂಪತ್ತನ್ನು ದಾನ ಮಾಡಿದ್ದು ಈ ತಿಂಗಳ ಕೊನೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಸಂಸಾರ ಜೀವನ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಲಿದ್ದಾರೆ.
ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿರುವ ಹಿಮ್ಮತ್‌ನಗರದ ಉದ್ಯಮಿ ಭಾವೇಶ್ ಭಂಡಾರಿ ೨೦೨೨ರಲ್ಲಿ ಸನ್ಯಾಸಿತ್ವ ಸ್ವೀಕರಿಸಿದ ತನ್ನ ೧೯ ವರ್ಷದ ಮಗಳು ಮತ್ತು ೧೬ ವರ್ಷದ ಮಗ ಹಾದಿಯನ್ನು ಇದೀಗ ಉದ್ಯಮಿ ಮತ್ತು ಅವರ ಪತ್ನಿ ಹಿಡಿದಿದ್ದು ಸನ್ಯಾಸತ್ವ ಸ್ವೀಕರಿಸಲು ಸಜ್ಜಾಗಿದ್ದಾರೆ.
ಜೈನ ಧರ್ಮದಲ್ಲಿ, ‘ದೀಕ್ಷಾ’ ತೆಗೆದುಕೊಳ್ಳುವುದು ಗಮನಾರ್ಹವಾದ ಬದ್ಧತೆಯಾಗಿದೆ, ವ್ಯಕ್ತಿಯು ಭೌತಿಕ ಸೌಕರ್ಯಗಳಿಲ್ಲದೆ, ಭಿಕ್ಷೆಯಿಂದ ಬದುಕುಳಿಯುತ್ತಾನೆ ಮತ್ತು ದೇಶದಾದ್ಯಂತ ಬರಿಗಾಲಿನಲ್ಲಿ ಅಲೆದಾಡುಬೇಕಾಗುತ್ತದೆ
ಏಪ್ರಿಲ್ ೨೨ ರಂದು ಪ್ರತಿಜ್ಞೆ ತೆಗೆದುಕೊಂಡ ನಂತರ, ದಂಪತಿಗಳು ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕಾಗುತ್ತದೆ ಮತ್ತು ಯಾವುದೇ ’ಭೌತಿಕ ವಸ್ತುಗಳನ್ನು’ ಇಟ್ಟುಕೊಳ್ಳಲು ಅನುಮತಿಸಲಾಗುವುದಿಲ್ಲ. ನಂತರ ಅವರು ಭಾರತದಾದ್ಯಂತ ಬರಿಗಾಲಿನಲ್ಲಿ ನಡೆಯುತ್ತಾರೆ ಮತ್ತು ಭಿಕ್ಷೆಯಿಂದ ಮಾತ್ರ ಬದುಕು ಸಾಗಿಸಲು ನಿರ್ಧರಿಸಿದ್ದಾರೆ.
ಕೇವಲ ಎರಡು ಬಿಳಿ ವಸ್ತ್ರಗಳನ್ನು ಹೊಂದಲು ಅನುಮತಿಸಲಾಗಿದ್ದು ಭಿಕ್ಷೆಗಾಗಿ ಒಂದು ಬಟ್ಟಲು ಮತ್ತು “ರಾಜೋಹರಣ”, ಬಿಳಿ ಪೊರಕೆ ಜೈನ ಸನ್ಯಾಸಿಗಳು ಅವರು ಕುಳಿತುಕೊಳ್ಳುವ ಮೊದಲು ಪ್ರದೇಶದಿಂದ ಕೀಟಗಳನ್ನು ದೂರ ತಳ್ಳಲು ಬಳಸುತ್ತಾರೆ.
ಅಪಾರ ಸಂಪತ್ತಿಗೆ ಹೆಸರಾದ ಭಂಡಾರಿ ಕುಟುಂಬದ ಈ ನಿರ್ಧಾರ ರಾಜ್ಯಾದ್ಯಂತ ಗಮನ ಸೆಳೆದಿದೆ. ಈ ಹಿಂದೆ ಸಂಯಮದ ಜೀವನ ನಡೆಸಲು ಕೋಟ್ಯಂತರ ಹಣದಿಂದ ದೂರ ಸರಿದಿದ್ದ ಭವರಲಾಲ್ ಜೈನ್ ಅವರಂತಹ ಬೆರಳೆಣಿಕೆಯಷ್ಟು ಮಂದಿಯ ಸಾಲಿಗೆ ಸೇರಿದ್ದಾರೆ.
ಭಂಡಾರಿ ದಂಪತಿಗಳು ಇತರ ೩೫ ಮಂದಿಯೊಂದಿಗೆ ನಾಲ್ಕು ಕಿಲೋಮೀಟರ್‌ಗಳವರೆಗೆ ಮೆರವಣಿಗೆ ನಡೆಸಿದರು, ಅಲ್ಲಿ ಅವರು ಮೊಬೈಲ್ ಫೋನ್‌ಗಳು ಮತ್ತು ಹವಾನಿಯಂತ್ರಣಗಳು ಸೇರಿದಂತೆ ಆಸ್ತಿ ದಾನ ಮಾಡಿದರು. ಮೆರವಣಿಗೆಯ ವೀಡಿಯೊಗಳು ರಾಜಮನೆತನದವರಂತೆ ಧರಿಸಿರುವ ರಥದ ಮೇಲೆ ದಂಪತಿಗಳನ್ನು ಕೂರಿಸಲಾಗಿತ್ತು.