ಐ ಫೋನ್ ೧೬ ಮಾರಾಟ ಆರಂಭ
ಮುಂಬೈ,ಸೆ.೨೦-ದೈತ್ಯ ಟೆಕ್ ಕಂಪನಿ ಆಪಲ್‌ನ ಹೊಸ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಐಫೋನ್ ೧೬ ಮಾರಾಟ ಪ್ರಾರಂಭವಾಗಿದೆ.
ಆಪಲ್ ಸೆಪ್ಟೆಂಬರ್ ೯ ರಂದು ಐಫೋನ್ ೧೬ ಸರಣಿಯನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಈ ಸ್ಮಾರ್ಟ್‌ಫೋನ್ ಬಗ್ಗೆ ಕುತೂಹಲ ಹೊಂದಿದ್ದರು. ಐಫೋನ್ ೧೬ ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಆದರೆ ಈ ಹೊಸ ಪವರ್ ಫುಲ್ ಫೋನ್ ಈಗಾಗಲೇ ಬಾಲಿವುಡ್ ನ ತಾರೆಗಳ ಕೈಗೆ ಬಂದಿದೆ.
ನಟಿ ನೇಹಾ ಧೂಪಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ವೀಟ್ ೧೬ ಎಂಬ ಶೀರ್ಷಿಕೆ ನೀಡಿ ಹೊಚ್ಚ ಹೊಸ ಐಫೋನ್ ೧೬ ನೊಂದಿಗೆ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಹೊಸ ಐಫೋನ್ ಖರೀದಿಯ ಬಗ್ಗೆ ಅನೇಕ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.
ಚುಲ್ಬುಲಿ ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಹೊಸ ಐಫೋನ್ ೧೬ ವಿಶೇಷ ನೋಟದಲ್ಲಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿದಿನ ಒಂದು ಸೇಬು ಎಂಬ ಶೀರ್ಷಿಕೆಯೊಂದಿಗೆ ಆಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಿವುಡ್‌ನ ಸುಂದರಿ ಮಾಧುರಿ ದೀಕ್ಷಿತ್ ಕೂಡ ಹೊಸ ಐಫೋನ್ ೧೬ ನೊಂದಿಗೆ ಸೆಲ್ಫಿ ಹಂಚಿಕೊಂಡಿದ್ದಾರೆ. ಇತರ ಫೋಟೋಗಳನ್ನು ಸಹ ಹಂಚಿಕೊಳ್ಳಲಾಗಿದೆ. ಮನೆಯ ಬಾಲ್ಕನಿಯಲ್ಲಿ ತೆಗೆದಿರುವ ಈ ಫೋಟೋ ಅಭಿಮಾನಿಗಳ ಫೇವರಿಟ್ ಆಗಿದೆ.
ಐಫೋನ್ ೧೬ ಮತ್ತು ಐಫೋನ್ ೧೬ ಪ್ಲಸ್ ಎಂಬ ಎರಡು ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಅಲ್ಟ್ರಾಮರೀನ್, ಟೀಲ್, ಪಿಂಕ್, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಈ ಸರಣಿಯಲ್ಲಿ ೧೨೮ಜಿಬಿ, ೨೫೬ಜಿಬಿ, ಮತ್ತು ೫೧೨ಜಿಬಿ ಸ್ಟೋರೇಜ್ ಆಯ್ಕೆಗಳು ಲಭ್ಯವಿದೆ. ಐಫೋನ್ ೧೬
ರೂ. ೭೯,೯೦೦ ಮತ್ತು ಐಫೋನ್ ೧೬ Pಟus ರೂ. ೮೯,೯೦೦ ರಿಂದ ಪ್ರಾರಂಭವಾಗುತ್ತದೆ.