ದಾಖಲೆಯ ಮೊತ್ತ ಪೇರಿಸಿದ ಸನ್ರೈಸರ್ಸ್
ಬೆಂಗಳೂರು: ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಐಪಿಎಲ್ ಇತಿಹಾಸದಲ್ಲೆ ನಾಲ್ಕನೆ ವೇಗದ ಶತಕ ಹೊಡೆದಿದ್ದಾರೆ. ಸನ್ರೈಸರ್ಸ್ ತಂಡ ಐಪಿಎಲ್ ಇತಿಹಾಸದಲ್ಲೆ ದಾಖಲೆಯ ಬರೋಬ್ಬರಿ 287 ರನ್ ಗಳಿಸಿದೆ. ಟಿ20 ಆವೃತ್ತಿಯಲ್ಲಿ ಎರಡನೆ ಅತಿ ಹೆಚ್ಚಿನ ಮೊತ್ತವಾಗಿದೆ.
ಸನ್ರೈಸರ್ಸ್ ತಂಡ ಮೊನ್ನೆ ಮುಂಬೈ ವಿರುದ್ಧ 277 ರನ್ ದಾಖಲಿಸಿತ್ತು ಇದೀಗ ತನ್ನ ದಾಖಲೆಯನ್ನ ತಾನೆ ಮುರಿದಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 287 ರನ್ ಕಲೆ ಹಾಕಿತು. ಸನ್ರೈಸರ್ಸ್ ಪರ ಓಪನರ್ಗಳಾದ ಅಭಿಷೇಕ್ ಶರ್ಮಾ (34ರನ್) ಮತ್ತು ಟ್ರಾವಿಸ್ ಹೆಡ್ (102ರನ್) ಮೊದಲ ವಿಕೆಟ್ಗೆ 108ರನ್ ಸೇರಿಸಿದರು. ಟ್ರಾವಿಸ್ ಹೆಡ್ (102ರನ್, 41ಎಸೆತ, 9ಬೌಂಡರಿ, 8 ಸಿಕ್ಸರ್) ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು 20 ಎಸೆತದಲ್ಲಿ ಅರೆ ಶತಕ, ನಂತರ 39 ಎಸೆತದಲ್ಲಿ ಶತಕ ಹೊಡೆದರು. ಹೆನ್ರಿಕ್ ಕ್ಲಾಸೆನ್(67ರನ್) 23 ಎಸೆತದಲ್ಲಿ ಅ ಶತಕ ಹೊಡೆದರು. ಏಡಿನ್ ಮಾರ್ಕ್ರಮ್ ಅಜೇಯ 32 ರನ್, ಅಬ್ದುಲ್ ಸಮಾದ್ ಅಜೇಯ 376 ರನ್ ಗಳಿಸಿದರು. ಆರ್ಸಿಬಿ ಪರ ಲಾಕಿ ಫರ್ಗ್ಯೂಸನ್ 52ಕ್ಕೆ 2, ಟಾಪ್ಲೆ 68ಕ್ಕೆ 1 ವಿಕೆಟ್ ಪಡೆದರು.