ರಾಯಲ್ ಕದನಕ್ಕೆ ಸಜ್ಜಾದ ರಾಜಸ್ಥಾನ, ಕೋಲ್ಕತ್ತಾ
ಕೋಲ್ಕತ್ತಾ: ತಾರಾ ಬ್ಯಾಟರ್ಗಳನ್ನು ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡ ಮಂಗಳವಾರ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ಮತ್ತು ಕೋಲ್ಕತ್ತಾ ತಂಡಗಳ ಕದನ ಕುತೂಹಲ ಕೆರೆಳಿಸಿದೆ. 2012ರಿಂದಲೂ ಆಲ್ರೌಂಡರ್ ಸುನಿಲ್ ನರೈನ್ ಸ್ಪಿನ್ ಮ್ಯಾಜಿಕ್ ಮೂಲಕ ಎದುರಾಳಿಗಳಿಗೆ ಕಂಟಕವಾಗಿದ್ದಾರೆ. 2012 ಮತ್ತು 2104ರ ಆವೃತ್ತಿಗಳಲ್ಲಿ ಕೋಲ್ಕತ್ತಾ ಚಾಂಪಿಯನ್ ಆದಾಗ ಸುನಿಲ್ ನರೈನ್ ತಂಡದ ಪ್ರಮುಖ ಆಟಗಾರನಾಗಿದ್ದರು.
ಸುನಿಲ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಕೋಲ್ಕತ್ತಾ ತಂಡಕ್ಕೆ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಆಸೆ ಚಿಗುರೊಡೆದಿದೆ.ಸನ್ರೈಸರ್ಸ್ ಮತ್ತು ಲಕ್ನೊ ವಿರುದ್ಧ ಒಂದೊಂದು ವಿಕೆಟ್ ಪಡೆದಿರಬಹುದು ಆದರೆ ಒಂದೇ ಬೌಂಡರಿ ಕೊಟ್ಟಿಲ್ಲ.
ಕಳೆದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರೆ ಸುನಿಲ್ ನರೈನ್ ಮಧ್ಯಮ ಓವರ್ಗಳಲ್ಲಿ ಸ್ಪಿನ್ ಮ್ಯಾಜಿಕ್ ಮಾಡಿ ಲ್ಕನೊ ತಂಡದ ಮೊತ್ತವನ್ನು ನಿಯಂತ್ರಿಸಿದರು.
ಸಂಜು ಸ್ಯಾಮ್ಸನ್, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೇಯರ್ 155ಕ್ಕೂ ಹೆಚ್ಚು ರನ್ ಹೊಡೆದಿದ್ದು ನರೈನ್ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ರಾಜಸ್ಥಾನ ಪರ ಜೋಸ್ ಬಟ್ಲರ್ ಫಿಟ್ ಆಗಿದ್ದಾರೆ. ಸುನಿಲ್ ಅವರು 183.51 ಸ್ಟ್ರೈಕ್ ರೇಟ್ ಹೊಂದಿದ್ದು 33 ಸರಾಸರಿ ಹೊಂದಿದ್ದಾರೆ. ವೇಗಿ ಮಿಚೆಲ್ ಸ್ಟಾರ್ಕ್ ಕಳೆದ ಪಂದ್ಯದಲ್ಲಿ 2 ವಿಕೆಟ್ ಪಡೆದು ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ. ಈ ಪಂದ್ಯ ಕೋಲ್ಕತ್ತಾ ಬೌಲಿಂಗ್ ಮತ್ತು ರಾಜಸ್ಥಾನ ಬ್ಯಾಟಿಂಗ್ ನಡುವಿನ ಕದನವಾಗಿದೆ.
ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ನಲ್ಲಿ ರನ್ ಗಳಿಸುತ್ತಿಲ್ಲಘಿ.ಕೋಲ್ಕತ್ತಾ ಸುನಿಲ್ ಅವರನ್ನು ನೆಚ್ಚಿಕೊಂಡಿದೆ ಮತ್ತು ಡೆತ್ ಓವರ್ನಲ್ಲಿ ರಸೆಲ್ ಬಿರುಸಿನ ಬ್ಯಾಟಿಂಗ್ ಮಾಡಬೇಕಿದೆ.
ಯುವ ಬ್ಯಾಟರ್ ರಿಂಕು ಸಿಂಗ್ 4 ಇನ್ನಿಂಗ್ಸ್ಗಳಿಂದ 63 ರನ್ ಹೊಡೆದಿದ್ದಾರೆ.ರಾಜಸ್ಥಾನ ಪರ ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಯಜ್ವಿಂಧರ್ ಚಹಾಲ್ ಮತ್ತು ಕೇಶವ್ ಮಹಾರಾಜ್ ಇದ್ದಾರೆ.